ದಾವಣಗೆರೆ – ಆವರಗೆರೆ ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಸಂಸ್ಥೆಯಲ್ಲಿ ಇಂದು ಬೆಳಿಗ್ಗೆ 11.30 ಕ್ಕೆ `ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ’ ಕಾರ್ಯಕ್ರಮ ನಡೆಯಲಿದೆ. ಸಂಸ್ಥೆಯ ಗೌರವ ಕಾರ್ಯದರ್ಶಿ ಎ.ಹೆಚ್. ಶಿವಮೂರ್ತಿಸ್ವಾಮಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಬಾಪೂಜಿ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಉಪನ್ಯಾಸಕ ರಾದ ಡಾ. ಜ್ಞಾನಶ್ರೀ, ಸಮಾಜ ಸೇವಾ ಕಾರ್ಯಕರ್ತೆ ಸುನಂದ ಮನೋಹರ್ ವೆರ್ಣೇಕರ್, ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಸಂಸ್ಥೆಯ ಅಧ್ಯಕ್ಷೆ ಎ.ಹೆಚ್. ಲಕ್ಷ್ಮೀ ಛಾಯ, ನಿರ್ದೇಶಕರಾದ ಎ.ಹೆಚ್. ಸುಗ್ಗಲಾದೇವಿ ಮತ್ತಿತರರು ಭಾಗವಹಿಸಲಿದ್ದಾರೆ.
January 16, 2025