ದಾವಣಗೆರೆ, ಸೆ. 4- ನಗರದ ಶಾಮನೂರು ಶಿವಶಂಕರಪ್ಪ ಪಾರ್ವ ತಮ್ಮ ಸಮುದಾಯ ಭವನದಲ್ಲಿ ನಾಳೆ ದಿನಾಂಕ 5ರ ಮಂಗಳವಾರ ನಡೆಯುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಯಶಸ್ವಿಯಾಗಲೆಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಜಿಲ್ಲೆಯ ಸಮಸ್ತ ಕನ್ನಡಿಗರ ಪರವಾಗಿ ಶುಭ ಹಾರೈಸಿದ್ದಾರೆ. ಪುಸ್ತಕದ ಪುಟದೊಳಗೆ ಸ್ಫುಟವಾಗಿ ಬರೆಸಿ, ಮನಸೊಳಗೆ ಜ್ಞಾನ ದೀವಿಗೆಯ ಬೆಳಗಿಸಿ, ಬದುಕಲ್ಲಿ ದಿಟ್ಟವಾಗಿ ನಡೆಯುವಂತೆ ಹರಸಿದ, ಬದುಕಿನ ನಿಜವಾದ ನಡೆ ನುಡಿಯನ್ನು ಕಲಿಸಿದ, ನುಡಿಯೊಂದಿಗೆ ಉತ್ತಮ ನಡೆಯನ್ನು ಕಲಿಸಿದ. ಬೋಧನೆಯ ಮೂಲಕ ಸಾಧನೆಯ ಹಾದಿಗೆ ನಡೆಸಿದ. ಗುರುವರ್ಯರೆಲ್ಲರಿಗೂ ಕೋಟಿ ಕೋಟಿ ಪ್ರಣಾಮಗಳು. ಶಿಕ್ಷಕ ವೃತ್ತಿಗೆ ಪಾವಿತ್ರ್ಯತೆಯನ್ನು ತಂದು ಕೊಟ್ಟ ಭಾರತದ ರಾಷ್ಟ್ರಪತಿ ಯಾಗಿದ್ದ ಡಾ. ಸರ್ವಪಲ್ಲಿ ರಾಧ ಕೃಷ್ಣನ್ ಅವರ ಜನುಮ ದಿನದ ಈ ಶುಭದಿನದಂದು ಸರ್ವ ಗುರು ವೃಂದಕ್ಕೂ ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ನಮನಗಳನ್ನು ಸಲ್ಲಿಸಿದ್ದಾರೆ.
January 8, 2025