ದಾವಣಗೆರೆ, ಸೆ. 1 – ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ನಾಡಿದ್ದು ದಿನಾಂಕ 3 ರಂದು ಜಿಲ್ಲೆಯ 23 ಪರೀಕ್ಷಾ ಕೇಂದ್ರಗಳಲ್ಲಿ ನಡೆ ಸಲಾಗುತ್ತಿದೆ. ಮೊದಲ ಅಧೀವೇಶನ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12 ರವರೆಗೆ ಹಾಗೂ 2ನೇ ಅಧೀವೇಶನ ಅಪರಾಹ್ನ 2.30 ರಿಂದ 4 ರವರೆಗೆ ನಡೆಯುತ್ತದೆ. ಒಟ್ಟು 7086 ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೊಟ್ರೇಶ್ ತಿಳಿಸಿದ್ದಾರೆ.
January 23, 2025