ಕೆ.ಬಿ. ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಶ್ರೀ ಗುರುರಾಯರ 352ನೇ ಆರಾಧನಾ ಮಹೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ 10.30ಕ್ಕೆ ಶ್ರೀ ಗುರುರಾಯರ ಚಲ ಪ್ರತಿಮೆಯೊಂದಿಗೆ ಹಾಗು ರಾಘವೇಂದ್ರ ಸ್ವಾಮಿಗಳು ರಚಿಸಿರುವ ಪರಿಮಳ ಗ್ರಂಥದ ಮೆರವಣಿಗೆ, ವೇದ ಘೋಷ ಭಜನೆ, ನಾದಸ್ವರ, ಚಂಡೆ ಮೇಳಗಳೊಂದಿಗೆ ಜರುಗಲಿದೆ. ಸಂಜೆ 7 ರಿಂದ ವಿದ್ವಾನ್ ವಿಶ್ವಂಭರ ಮತ್ತು ಸಂಗಡಿಗರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಗುರುರಾಜ ಸೇವಾ ಸಂಘದ ಅಧ್ಯಕ್ಷ ಕೋಸ ಪ್ರಸನ್ನಕುಮಾರ್ ತಿಳಿಸಿದರು.
January 23, 2025