ಹೊನ್ನಾಳಿ, ಸೆ. 1 – ಅವಧಿ ಮುಗಿಯುವ ಮುನ್ನವೇ ವರ್ಗಾವಣೆ ಗೊಂಡಿದ್ದ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಅವರು ಮೂರು ದಿನದಲ್ಲಿ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಉಪವಿಭಾಗಾಧಿಕಾರಿ ಸ್ಥಾನಕ್ಕೆ ಹಿರಿಯ ಶ್ರೇಣಿ ಉಪವಿಭಾಗಾಧಿಕಾರಿ ರೇಷ್ಮಾ ಹಾನಗಲ್ ಅವರು ಆಗಸ್ಟ್ 24ರಂದು ಕರ್ತವ್ಯಕ್ಕೆ ಹಾಜರಾಗಿದ್ದರು.
ಇಲ್ಲಿಂದ ವರ್ಗಾವಣೆಗೊಂಡಿದ್ದ ಹುಲ್ಲುಮನಿ ತಿಮ್ಮಣ್ಣ ಅವರು ವರ್ಗಾವಣೆ ಆದೇಶದ ವಿರುದ್ಧ ಸೋಮವಾರವೇ ಕರ್ನಾಟಕ ನ್ಯಾಯಾಧೀರಣ ಮೊರೆ ಹೋಗಿ ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ತಂದಿದ್ದರು. ಆದೇಶ ಪ್ರತಿಯೊಂದಿಗೆ ಮತ್ತೆ ಗುರುವಾರ ಕಚೇರಿಗೆ ಕರ್ತವ್ಯಕ್ಕೆ ಹಾಜರಾದರು.
ಕಳೆದ 16 ತಿಂಗಳ ಹಿಂದೆ ನೂತನವಾಗಿ ಉಪ ವಿಭಾಗಾಧಿಕಾರಿಗಳ ಕಚೇರಿ ಹೊನ್ನಾಳಿಯಲ್ಲಿ ಪ್ರಾರಂಭ ವಾಗಿತ್ತು. ಅಲ್ಲಿಂದ ಹುಲ್ಲುಮನಿ ತಿಮ್ಮಣ್ಣ ಅವರು ಪ್ರಥಮ ಉಪವಿಭಾಗಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.