ದಾವಣಗೆರೆ, ಸೆ. 1- ಗಾಯುಸ್ ಗ್ಲಿಟ್ಸ್ ಯೂಟ್ಯೂಬ್ ಚಾನಲ್ ವತಿ ಯಿಂದ ನಾಳೆ ದಿನಾಂಕ 2 ರ ಶನಿವಾರ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಶ್ರೀ ಸದ್ಯೋಜಾತ ಹಿರೇಮಠದಲ್ಲಿ ‘ಆರ್ಗ್ಯಾನಿಕ್ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಯೂಟ್ಯೂಬರ್ ಟಿ. ಗಾಯತ್ರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಮೇಳ ವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ವಿಶ್ವೇಶ್ವರ ಸಜ್ಜನ್ ಉದ್ಘಾಟಿಸಲಿದ್ದಾರೆ. ಅಭಯ್ ಮುತಾಲಿಕ್ ದೇಸಾಯಿ, ಮಾರುತಿ ಮಂಚಿ ಹಾಗೂ ಸರೋಜ ಪಾಟೀಲ್ ಆಗಮಿಸಲಿದ್ದಾರೆ. ಸಂಜೆ ಸಾಮೂಹಿಕ ಅಗ್ನಿಹೋತ್ರ ನೆರವೇರಲಿದೆ. ಪತ್ರಿಕಾಗೋಷ್ಠಿಯಲ್ಲಿ, ಪಿ.ವಿ. ರವಿಕುಮಾರ್, ಟಿ. ಸತೀಶ್, ಜೆ. ಕಿರಣ್ ಉಪಸ್ಥಿತರಿದ್ದರು.
January 24, 2025