ದಾವಣಗೆರೆ, ಆ. 30- ಆನೆಕೊಂಡದ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬರುವ ಸೆಪ್ಟೆಂಬರ್ 11ರ ಸೋಮವಾರ ಸಂಜೆ 6.50ಕ್ಕೆ ಶ್ರೀ ಬಸವೇಶ್ವರ ಮತ್ತು ನೀಲಾನಹಳ್ಳಿಯ ಶ್ರೀ ಆಂಜನೇಯ ಸ್ವಾಮಿ ಹಾಗೂ ನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಿ ಮತ್ತು ಸುತ್ತಮುತ್ತಲಿನ ದೇವರುಗಳೊಂದಿಗೆ ಮೆರವಣಿಗೆ ನಡೆದು, ನಂತರ ಶ್ರೀ ಬಸವೇಶ್ವರ ಸ್ವಾಮಿಯ ಜಾತ್ರೋತ್ಸವ ಮತ್ತು ಕಾರಣಿಕೋತ್ಸವ ಜರುಗಲಿದೆ.
ಸೆಪ್ಟೆಂಬರ್ 9ರ ಶನಿವಾರ ಶನಿದೇವರ ಪುರಾಣ ಹಾಗೂ ಸೆ. 10ರ ಭಾನುವಾರ ಅನ್ನ ಸಂತರ್ಪಣೆ ಹಾಗೂ ರಾತ್ರಿ 9ಕ್ಕೆ ಭಜನಾ ಕಾರ್ಯಕ್ರಮವಿದೆ.