ಚಿತ್ರದುರ್ಗ, ಆ.29- ಮನೆ ಯಜಮಾನಿಗೆ ಮಾಸಿಕ 2 ಸಾವಿರ ರೂ. ನೀಡುವ ‘ಗೃಹಲಕ್ಷ್ಮಿ’ ಯೋಜನೆಗೆ ಜಿಲ್ಲೆಯಲ್ಲಿ ಈವರೆಗೆ 3.54 ಲಕ್ಷ ನೋಂದಣಿಯಾಗಿದೆ.
ನಗರ ಪ್ರದೇಶದಲ್ಲಿ 59,310 ಹಾಗೂ ಗ್ರಾಮೀಣ ಭಾಗದಲ್ಲಿ 2,95,576 ಸೇರಿ ಒಟ್ಟು 3,54,886 ಮಹಿಳೆಯುರು ಯೋಜನೆಗೆ ನೋಂದಾಯಿಸಿಕೊಂಡಿದಾರೆ.
ಚಿತ್ರದುರ್ಗ ತಾಲ್ಲೂಕು 82,536, ಚಳ್ಳಕೆರೆ 76,986, ಹಿರಿಯೂರು 63,565, ಹೊಳಲ್ಕೆರೆ 46,999, ಹೊಸದುರ್ಗ 50,580 ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 34,220 ಮಹಿಳೆಯರು ಯೋಜನೆಗೆ ನೋಂದಾಯಿಸಿದ್ದಾರೆ.
ಶಕ್ತಿ ಯೋಜನೆಯಡಿ ಆ.23 ರವರೆಗೆ 43.75 ಲಕ್ಷ ಮಹಿಳೆಯರು ಚಿತ್ರದುರ್ಗ ವಿಭಾಗದ ಬಸ್ಗಳಲ್ಲಿ ಸಂಚಾರ ಮಾಡಿದ್ದಾರೆ. ಇದರ ಒಟ್ಟು ಮೊತ್ತ 16.57 ಕೋಟಿ ರೂ.ಗಳಾಗಿದೆ.
ಜಿಲ್ಲೆಯಲ್ಲಿ 4.7 ಲಕ್ಷ ವಿದ್ಯುತ್ ಬಳಕೆದಾರರು ಇದ್ದು, ಇದರಲ್ಲಿ ಜುಲೈ ಅಂತ್ಯದವರೆಗೂ 3.37 ಲಕ್ಷ ಗೃಹ ವಿದ್ಯುತ್ ಬಳಕೆದಾರರು ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ.