ನಗರದಲ್ಲಿ ಇಂದು ಜಿವ್ಹೇಶ್ವರ ಜಯಂತ್ಯೋತ್ಸವ

ನಗರದಲ್ಲಿ ಇಂದು ಜಿವ್ಹೇಶ್ವರ ಜಯಂತ್ಯೋತ್ಸವ

ಹಿಂದುಳಿದ ಸಮಾಜಗಳಲ್ಲೊಂದಾದ ಸ್ವಕುಳಸಾಳಿ ಸಮಾಜದ ಆರಾಧ್ಯ ದೈವ ಭಗವಾನ್ ಶ್ರೀ ಜಿವ್ಹೇಶ್ವರ ಸ್ವಾಮಿಯ ಜಯಂತ್ಯೋತ್ಸವವು ಶ್ರೀ ಗುಂಡಿ ಮಹಾ ದೇವಪ್ಪ ಕಲ್ಯಾಣ ಮಂಟಪದಲ್ಲಿ ಇಂದು ನಡೆಯಲಿದೆ.

ಮುಂಜಾನೆ 6.30 ರಿಂದಲೇ ಶ್ರೀ ಸ್ವಾಮಿಯ ಪೂಜಾ ವಿಧಿ-ವಿಧಾನಗಳು ಆರಂಭಗೊಳ್ಳಲಿವೆ. ನಂತರ ಬೆಳಿಗ್ಗೆ 9 ರಿಂದ ವಿವಿಧ ಪುಷ್ಪಗಳಿಂದ ಶೃಂಗಾರಗೊಂಡ ಟ್ರ್ಯಾಕ್ಟರ್ ನಲ್ಲಿ ಶ್ರೀ ಜಿವ್ಹೇಶ್ವರ ಸ್ವಾಮಿ ಭಾವಚಿತ್ರದ ಮೆರವಣಿಗೆ ರಾಜಬೀದಿಗಳಲ್ಲಿ ಸಂಚರಿಸಲಿದೆ. ಮೆರವಣಿಗೆ ನಂತರ ಬೆಳಿಗ್ಗೆ 10 ಗಂಟೆಗೆ ಸಭಾ ಕಾರ್ಯಕ್ರಮ ಏರ್ಪಾಡಾಗಿದೆ.

ಸಂಸ್ಕೃತ ವಿದ್ವಾಂಸರೂ ಆಗಿರುವ ಶ್ರೀ ಜಡೇಸಿದ್ದ ಶಿವಯೋಗೀಶ್ವರ ಮಠದ ಶ್ರೀ ಶಿವಾನಂದ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸುವರು.

ಸ್ವಕುಳ ಸಾಳಿ ಸಮಾಜದ ಅಧ್ಯಕ್ಷ ಮೋಹನ್ ಪಿ. ಗಾಯಕ್ ವಾಡ್ ಅವರ ಅಧ್ಯಕ್ಷತೆಯಲ್ಲಿ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಸಮಾರಂಭದ ಉದ್ಘಾಟನೆ ನೆರವೇರಿಸುವರು. 

ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಮಲ್ಲಿಕಾರ್ಜುನ್, ಮಾಜಿ ಸಂಸದ ಕೆ.ಸಿ. ಕೊಂಡಯ್ಯ, ಮಹಾನಗರ ಪಾಲಿಕೆ ಮಹಾಪೌರ ವಿನಾಯಕ ಪೈಲ್ವಾನ್, ದೂಡಾ ಮಾಜಿ ಅಧ್ಯಕ್ಷ ಡಿ. ಮಾಲತೇಶರಾವ್ ಜಾದವ್, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಅನಿತಾಬಾಯಿ ಜಾಧವ್, ರಾಜ್ಯ ಸ್ವಕುಳಸಾಳಿ ಗುರುಪೀಠ ಸ್ಥಾಪನಾ ಸಮಿತಿ ಗೌರವಾಧ್ಯಕ್ಷ ನೀಲಕಂಠಪ್ಪ ರೋಖಡೆ, ರಾಣೇಬೆನ್ನೂರು – ಹಂಸಬಾವಿಯ ಶ್ರೀ ಮಹಾಂತ ಸ್ವಾಮಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಧೀರೇಂದ್ರ ಏಕಬೋಟೆ, ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಬಸವರಾಜ್ ಗುಬ್ಬಿ, ಜಿಲ್ಲಾ ನೇಕಾರ ವೇದಿಕೆ  ಅಧ್ಯಕ್ಷ ಎಲ್. ಸತ್ಯನಾರಾಯಣ, ನಗರಸಭೆ ಮಾಜಿ ಅಧ್ಯಕ್ಷ ಆರ್.ಎಲ್‌. ನಾಗಭೂಷಣ್, ಕಲ್ಪತರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಡಿ.ಎನ್. ಜಗದೀಶ್ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಇದೇ ಸಂದರ್ಭದಲ್ಲಿ ಸ್ವಕುಳಸಾಳಿ ಸಮಾಜದ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ಸ್ವಕುಳಸಾಳಿ ಸಮಾಜದ ಪ್ರಧಾನ ಕಾರ್ಯದರ್ಶಿ ಧರ್ಮರಾಜ್ ಏಕಬೋಟೆ ವಿವರಿಸಿದ್ದಾರೆ.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸ್ವಕುಳಸಾಳಿ ಸಮಾಜ ಬಾಂಧವರು, ಶ್ರೀ ಜಿವ್ಹೇಶ್ವರ ಸ್ವಾಮಿಯ ಸದ್ಭಕ್ತರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸಮಾಜದ ಉಪಾ ಧ್ಯಕ್ಷ ಸುರೇಂದ್ರ ವಾಂಜ್ರೆ, ಸಹ ಕಾರ್ಯದರ್ಶಿ ವಾಸುದೇವ ಸಾಕ್ರೆ, ಖಜಾಂಚಿ ಗಣೇಶ ಪಿ. ಕ್ಷೀರಸಾಗರ ಸಂಘಟನಾ ಕಾರ್ಯದರ್ಶಿ ಮಂಜುನಾಥ ಎನ್. ಕಾಂಬ್ಳೆ, ಸಲಹೆಗಾರ ರಾದ ಮಂಜುನಾಥ ವಾಂಜ್ರೆ, ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ಪದ್ಮಾವತಿ ವಾಂಜ್ರೆ, ಕಾರ್ಯದರ್ಶಿ ಶ್ರೀಮತಿ ಸುಜಾತ ರೋಖಡೆ ಅವರುಗಳು ಕೋರಿದ್ದಾರೆ.

error: Content is protected !!