ಮಲೇಬೆನ್ನೂರು ಸಮೀಪದ ಕುಂಬಳೂರು ಗ್ರಾಮದ ಶ್ರೀ ಬಸವ ಗುರುಕುಲ ಶಾಲೆಯ ಸಭಾ ಭವನದಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ 9 ರಿಂದ 12ನೇ ತರಗತಿಯ ಹೆಣ್ಣು ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಪೋಕ್ಸೋ ಕಾಯ್ದೆಯ ಅರಿವು ಮೂಡಿಸುವ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರದಲ್ಲಿ ಮಲೇಬೆನ್ನೂರು ಸೇರಿದಂತೆ ಸುತ್ತಮುತ್ತಲಿನ 23 ಶಾಲಾ-ಕಾಲೇಜುಗಳ 178 ವಿದ್ಯಾರ್ಥಿಗಳು ಮತ್ತು 23 ಶಿಕ್ಷಕರು ಭಾಗವಹಿಸಲಿದ್ದಾರೆಂದು ಬಿಇಓ ಹನುಮಂತಪ್ಪ ಮತ್ತು ಬಸವ ಗುರುಕುಲ ಶಾಲೆಯ ಮುಖ್ಯ ಶಿಕ್ಷಕ ಗುಂಡಣ್ಣನವರ್ ತಿಳಿಸಿದ್ದಾರೆ.
January 11, 2025