ದಾವಣಗೆರೆ, ಆ. 27 – ಅಪಘಾತದಲ್ಲಿ ಮೃತಪಟ್ಟ ಲಲಿತಮ್ಮ ಅವರ ಪತಿಯಾದ ಏಕಾಂಬರಪ್ಪನವರಿಗೆ ಬುಧವಾರದಂದು ದಾವಣ ಗೆರೆ ವಿಭಾಗೀಯ ಕಚೇರಿಯಲ್ಲಿ ಕರಾರಸಾನಿ ಸಂಸ್ಥೆಯ ಅಪಘಾತ ಪರಿಹಾರ ನಿಧಿಯಿಂದ ರೂ. 2,75,000 ಚೆಕ್ಅನ್ನು ಕರಾರಸಾನಿ ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿ ವಿತರಿಸಿದರು.
ಜನವರಿ 23 ರಂದು ಹೊಸದುರ್ಗ-ದಾವಣಗೆರೆ ಮಾರ್ಗವಾಗಿ ಚಲಿಸುತ್ತಿದ್ದ ದಾವಣಗೆರೆ ಘಟಕ 1ರ ಕೆ.ಎಸ್.ಆರ್.ಟಿ.ಸಿ ಬಸ್ ಮಾಯಕೊಂಡ ಬಳಿಯ ಬಸಾಪುರ ಮತ್ತು ಹಿಂಡಸಘಟ್ಟ ರಸ್ತೆಯಲ್ಲಿ ಅಪಘಾತವಾಗಿ, ಬಸ್ನಲ್ಲಿದ್ದ ಶ್ರೀಮತಿ ಲಲಿತಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದರಿಂದ, ಪರಿಹಾರ ಹಣವನ್ನು ವಿತರಿಸಲಾಯಿತು.