ಹನಗವಾಡಿಯಲ್ಲಿನ ರಾಜ್ಯಮಟ್ಟದ ಅಧ್ಯಯನ ಶಿಬಿರದಲ್ಲಿ ಇಂದು

ಹರಿಹರ ತಾಲ್ಲೂಕು ಹನಗವಾಡಿ ಗ್ರಾಮದ ಪ್ರೊ. ಬಿ. ಕೃಷ್ಣಪ್ಪ ಭವನ (ಮೈತ್ರಿ ವನ)ದಲ್ಲಿ ನಡೆಯುತ್ತಿರುವ ದಲಿತ ಚಳವಳಿ ಅಂದು, ಇಂದು, ಮುಂದು ಕುರಿತ ಕಾರ್ಯಕರ್ತರು ಮತ್ತು ಪದಾಧಿಕಾರಿಗಳ ರಾಜ್ಯಮಟ್ಟದ ಅಧ್ಯಯನ ಶಿಬಿರದಲ್ಲಿ ಇಂದು ವಿವಿಧ ಗೋಷ್ಠಿಗಳು ನಡೆಯಲಿವೆ.

ಬೆಳಿಗ್ಗೆ 10 ಗಂಟೆಗೆ ಮೊದಲ ಗೋಷ್ಠಿ ನಡೆಯಲಿದ್ದು, `ಶಿಕ್ಷಣ ವ್ಯವಸ್ಥೆ ಮತ್ತು ದಲಿತರ ಪ್ರತಿನಿಧೀಕರಣ’ ವಿಚಾರ ಕುರಿತು ಜನಪರ ಹೋರಾಟಗಾರ ಬಿ. ಶ್ರೀಪಾದ ಭಟ್, ರಾಮನಗರ ಪ್ರಾಧ್ಯಾಪಕ ಡಾ. ಹೆಚ್.ಡಿ. ಉಮಾಶಂಕರ್ ವಿಷಯ ಮಂಡನೆ ಮಾಡುವರು.

ಮಧ್ಯಾಹ್ನ 12 ಕ್ಕೆ ನಡೆಯುವ ಎರಡನೇ ಗೋಷ್ಠಿಯಲ್ಲಿ  `ಮೀಸಲಾತಿಯ ಚಾರಿತ್ರ್ಯಿಕ ಬೆಳವಣಿಗೆ ಮತ್ತು ನ್ಯಾಯಾಂಗದ ತೀರ್ಪುಗಳು’ ಕುರಿತು ಹೈಕೋರ್ಟ್ ವಕೀಲ ಹೆಚ್.ವಿ. ಮಂಜುನಾಥ ಅವರೊಂದಿಗೆ ಗುಂಪು ಚರ್ಚೆ ನಡೆಸಲಾಗುವುದು.

ಮಧ್ಯಾಹ್ನ 2 ಗಂಟೆಗೆ `ಮಾಧ್ಯಮಗಳು ಮತ್ತು ದಲಿತರ ಪ್ರಶ್ನೆಗಳು’ ಕುರಿತು ಪತ್ರಕರ್ತ ಡಾ. ರವಿಕುಮಾರ್ ಬಾಗಿ ಮಾತನಾಡಲಿದ್ದಾರೆ. ಸಂಜೆ 4 ಗಂಟೆಗೆ `ಜನಪ್ರಿಯ ಸಂಸ್ಕೃತಿಯಲ್ಲಿ ಅಂಬೇಡ್ಕರ್’ ವಿಚಾರ ಕುರಿತು ಕೆ.ಪಿ. ಲಕ್ಷ್ಮಣ್, ಅನಿಲ್ ರೆವೂರ್ ಮಾತನಾಡಲಿದ್ದಾರೆ.  ನಂತರ ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ

error: Content is protected !!