ಹರಪನಹಳ್ಳಿ ಸ್ಥಿರಾಸ್ತಿ ಬೆಲೆ ಪರಿಷ್ಕರಣೆ ಸಾರ್ವಜನಿಕರ ಆಕ್ಷೇಪಣೆಗೆ ಅವಕಾಶ

ಹರಪನಹಳ್ಳಿ, ಆ.25- ತಾಲ್ಲೂಕು  ಉಪ ನೋಂದಣಿ ಕಚೇರಿ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಮಾರ್ಗಸೂಚಿ ಬೆಲೆಯನ್ನು 2023-24ನೇ ಸಾಲಿಗೆ ಪರಿಷ್ಕರಿಸಲು  ಮಾರುಕಟ್ಟೆ ಮೌಲ್ಯ ನಿರ್ಧರಣಾ ಉಪಸಮಿತಿ ನಿರ್ಧರಿಸಿದೆ.  ತಹಶೀಲ್ದಾರರು ಹರಪನಹಳ್ಳಿ ಇವರ ಅಧ್ಯಕ್ಷತೆಯಲ್ಲಿ ಕಳೆದ ವಾರ ನಡೆದ 

ಸಭೆಯಲ್ಲಿ ಮಾರುಕಟ್ಟಿ ಬೆಲೆಗಳನ್ನು ಪರಿಷ್ಕರಿಸಿ ಪರಿಷ್ಕೃತ ದರಗಳ ಕರಡು ಪ್ರತಿಯನ್ನು ಸಾರ್ವಜನಿಕರ ತಿಳುವಳಿಕೆಗಾಗಿ ಉಪನೋಂದಣಿ ಕಚೇರಿಯಲ್ಲಿ ಪ್ರಕಟಿಸಲಾಗಿದೆ.

ಉದ್ದೇಶಿತ ದರಗಳ ಬಗ್ಗೆ ಸಾರ್ವಜನಿಕರು ತಮ್ಮ ಆಕ್ಷೇಪಣೆಗಳೇನಾದರೂ ಇದ್ದಲ್ಲಿ  15 ದಿನಗಳೊಳಗಾಗಿ ಸದಸ್ಯ ಕಾರ್ಯದರ್ಶಿ ಹಾಗೂ ಉಪ ನೋಂದಣಾಧಿಕಾರಿಗಳು, ಮಾರುಕಟ್ಟೆ ಬೆಲೆ ಉಪ ಸಮಿತಿ ಹರಪನಹಳ್ಳಿ ಇವರಿಗೆ ಸಲ್ಲಿಸಲು ಸೂಚಿಸಲಾಗಿದೆ. ಅವಧಿ ಮುಗಿದ ನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ ಎಂದು ತಿಳಿಸಲಾಗಿದೆ.

error: Content is protected !!