ಇದೇ ದಿನಾಂಕ 29 ರಂದು ಮೇಜರ್ ದ್ಯಾನ್ಚಂದ್ ಅವರ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತಿದ್ದು, ಸ್ಥಳೀಯ ಪ್ರಚಲಿತ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.
ಷಟಲ್ ಬ್ಯಾಡ್ಮಿಂಟನ್ ಕ್ರೀಡೆಯನ್ನು ಶ್ರೀ ನೇತಾಜಿ ಸುಭಾಷ್ ಚಂದ್ರಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಇಂದು ಆಯೋಜಿಸಿದ್ದು, ಬೆಳಿಗ್ಗೆ 9 ಗಂಟೆಗೆ ವರದಿ ಮಾಡಿಕೊಳ್ಳ ಬೇಕು (ಶ್ರೀಶೈಲ ಎಸ್ ಮೊ.ನಂ: 9448667255) ರಸ್ತೆ ಓಟ (ಪುರುಷ-6ಕಿ.ಮೀ) (ಮಹಿಳೆ–3ಕಿ.ಮೀ) ಕ್ರೀಡೆ ನಾಳೆ ಶುಕ್ರವಾರ ಜಿಲ್ಲಾ ಕ್ರೀಡಾಂಗಣದಿಂದ ಪ್ರಾರಂಭವಾಗುತ್ತದೆ. ಬೆಳಿಗ್ಗೆ 7.30 ಗಂಟೆಗೆ ವರದಿ ಮಾಡಿಕೊಳ್ಳಬೇಕು. (ವಿನೋದ್ಕುಮಾರ್. ಕೆ. ಮೊ.ನಂ: 8971388143)