ಬಾಳೆಹೊನ್ನೂರು, ಆ. – 23 ಇಸ್ರೋದ ಚಂದ್ರಯಾನ-3ರ ಅಂಗವಾಗಿ ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಪಾದಾರ್ಪಣೆ ಮಾಡಿದ್ದನ್ನು ಕಂಡು ತಮಗೆ ಹೃದಯ ತುಂಬಿ ಬಂದಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ತೀವ್ರ ಸಂತಸವನ್ನು ಹಂಚಿಕೊಂಡಿದ್ದಾರೆ.
ಭಾರತೀಯ ವಿಜ್ಞಾನಿಗಳ ಶ್ರಮದ ಐತಿಹಾಸಿಕ ಸಾಧನೆಗೆ ಇಡೀ ವಿಶ್ವವೇ ಹೆಮ್ಮೆ ಪಡುವಂತಾಗಿದೆ. ಈಗಾಗಲೇ ಹಲವಾರು ದೇಶಗಳು ಚಂದಿರನ ವಿವಿಧ ಪ್ರದೇಶಗಳಲ್ಲಿ ಪಾದಾರ್ಪಣೆ ಮಾಡಿವೆ. ಆದರೆ ಚಂದಿರನ ದಕ್ಷಿಣ ಧ್ರುವದಲ್ಲಿ ಪ್ರಪ್ರಥಮ ಹೆಜ್ಜೆ ಇಟ್ಟ ಕೀರ್ತಿ ಭಾರತದ್ದಾಗಿದೆ. ಇಸ್ರೋದ ಮುಖ್ಯಸ್ಥರನ್ನೊಳಗೊಂಡು ಸಮಸ್ತ ವಿಜ್ಞಾನಿಗಳಿಗೆ ತಮ್ಮ ಶುಭ ಹಾರೈಕೆಗಳನ್ನು ನೀಡುವುದಾಗಿ ಅವರು ತಿಳಿಸಿದ್ದಾರೆ. ವಿಜ್ಞಾನಿಗಳ ಪರಿಶ್ರಮಕ್ಕೆ ಬೆನ್ನೆಲುಬಾಗಿ ನಿಂತ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೂ ಅಭಿನಂದನೆಗಳನ್ನು ಅವರು ತಿಳಿಸಿದ್ದಾರೆ. ವರ್ಷಗಟ್ಟಲೇ ಶ್ರಮಪಟ್ಟಿದ್ದು ಇಂದು ಫಲ ನೀಡಿದೆ. ನಮ್ಮ ವಿಜ್ಞಾನಿಗಳ ಸಾಧನೆಯನ್ನು ಎಷ್ಟು ಹೊಗಳಿದರೂ ಕಡಿಮೆಯಾಗಿದೆ. ಇಂತಹ ಸಾಧನೆಗಳು ಇಸ್ರೋ ವಿಜ್ಞಾನಿಗಳಿಂದ ಇನ್ನೂ ಹೆಚ್ಚು ಹೆಚ್ಚಾಗಿ ನಡೆಯಲೆಂದು ಅವರು ಶುಭ ಹಾರೈಸಿದ್ದಾರೆ.