ಕ್ಲಿಷ್ಟಕರ ಕ್ಯಾನ್ಸರ್‌ಗೆ ಯಶಸ್ವೀ ಶಸ್ತ್ರಚಿಕಿತ್ಸೆ

ದಾವಣಗೆರೆ, ಆ. 23-  ಕ್ಲಿಷ್ಟಕರ, ಅಪರೂಪದ, ಅತ್ಯಂತ ಸಂಕೀರ್ಣ ಕ್ಯಾನ್ಸರ್‌ಗೆ ದಾವಣಗೆರೆ ನಂಜಪ್ಪ ಆಸ್ಪತ್ರೆ ವೈದ್ಯರ ತಂಡ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಯಶಸ್ಸಿಯಾಗಿದ್ದಾರೆಂದು ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞ ಡಾ. ಎನ್. ನಿಶ್ಚಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರೆಟ್ರೋ ಪರಿಟೋನಿಯಲ್ ಪ್ಯಾರಾಗಿ ಯೋಮಾ ಸಿಂಡ್ರೋಮ್ ಜತೆ ಬೈಲ್ಯಾಟರಲ್ ಮೆಟಾನಿಫ್ರೀನ್ ಫಿಯೋಕ್ರೋಮೋ ಸೈಟೋಮದಿಂದ ಬಳಲುತ್ತಿದ್ದ ಮಹಿಳಾ ರೋಗಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಅಧಿಕ ರಕ್ತದೊತ್ತಡ, ಮಧುಮೇಹ ಇದ್ದ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದರು.

ಮತ್ತೊಂದು ಪ್ರಕರಣದಲ್ಲಿ ಯಕೃತ್ ಶಸ್ತ್ರಚಿಕಿತ್ಸೆಯನ್ನು 65 ವರ್ಷದ ವ್ಯಕ್ತಿಗೆ ಮಾಡಲಾಗಿದ್ದು, ಲಿವರ್ ವೈಫಲ್ಯ, ಪಿತ್ತರಸ ಸೋರಿಕೆ, ರಕ್ತ ಸೋಂಕಿನಂತಹ ಗಂಭೀರ ಸವಾಲುಗಳಿದ್ದರೂ ಸಹ ಪರಿಣಿತ ವೈದ್ಯರ ನಿರಂತರ ಶ್ರಮದಿಂದಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

ಇನ್ನೊಂದು ಪ್ರಕರಣದಲ್ಲಿ ಬಾಯಿ ಕ್ಯಾನ್ಸರ್ ಆಗಿದ್ದ ಯುವಕರಿಗೆ `ಫ್ರೀ ಫ್ಲಾಪ್’ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಡಾ. ಎನ್. ನಿಶ್ಚಲ್, ಡಾ. ವಿಜಯ ಚಂದ್ರಪ್ಪ, ಡಾ. ವೆಂಕಟೇಶ್ವರಲು ಅವರ ತಂಡ ಈ ಮೂರು ಕ್ಷಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಮಾಡಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವೈದ್ಯರಾದ ಡಾ. ವಿಜಯ ಚಂದ್ರಪ್ಪ, ಡಾ. ಶಿವರಾಜ್ ಅಫ್ಜಲ್‌ಪುರ, ಡಾ. ಗಣೇಶ್ ಗೌಡ, ಪ್ರಶಾಂತ್  ಉಪಸ್ಥಿತರಿದ್ದರು.

error: Content is protected !!