ದಾವಣಗೆರೆ, ಆ.23- ಇಂದು ಭಾರತದ ವಿಕ್ರಂ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಸುರಕ್ಷಿತವಾಗಿ ಹೆಜ್ಜೆ ಇಟ್ಟ ಘಳಿಗೆಯಲ್ಲಿ ನಗರದ ಚಾಣಕ್ಯ ಕಾಲೇಜು ಹಾಗೂ ಪ್ರೇರಣ ಅಕಾಡೆಮಿಯ ವಿದ್ಯಾರ್ಥಿಗಳು ಸಂಭ್ರಮ ಆಚರಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಘೋಷಣೆಗಳೊಂದಿಗೆ ಭಾರತ ಮಾತೆ ಮತ್ತು ಇಸ್ರೋ ಸಂಸ್ಥೆಯನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಕೆ.ರಾಜಶೇಖರ್, ಡೀನ್ ಸ್ವಾಮಿ, ಪ್ರೇರಣಾ ಅಕಾಡೆಮಿ ಅಧ್ಯಕ್ಷ ಜಿ.ಬಿ.ಲೋಹಿತ್ ಕುಮಾರ್, ಉಪಾಧ್ಯಕ್ಷ ಕಲ್ಲೇಶ್ ಹಾಗೂ ಇತರರು ಹಾಜರಿದ್ದರು.