ದಾವಲ್ ಪೇಟೆಯ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಶ್ರೀ ಚೌಡೇಶ್ವರಿ ಅಮ್ಮನವರ 43ನೇ ವರ್ಷದ ಶ್ರಾವಣ ಮಾಸದ ರಥೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಇಂದು ಮತ್ತು ನಾಳೆ ನಡೆಯಲಿದೆ.
ಇಂದು ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಿಂದ ವಿಶೇಷ ಪೂಜೆ, ಅಭಿಷೇಕ ನಡೆಯಲಿದೆ. ನಂತರ 4 ಗಂಟೆಗೆ ಇರುವ ರಥೋತ್ಸವಕ್ಕೆ ಕುಲಗುರು ಶ್ರೀ ದಿವ್ಯಜ್ಞಾನಾ ನಂದಗಿರಿ ಸ್ವಾಮೀಜಿ ಚಾಲನೆ ನೀಡಲಿದ್ದಾರೆ. ನಾಳೆ ಶುಕ್ರವಾರ ನಡೆಯುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಅಂದು ಬೆಳಿಗ್ಗೆ 10-30 ಕ್ಕೆ ತೊಗಟವೀರ ಸಮುದಾಯ ಭವನದಲ್ಲಿ ಕುಲ ಗುರು ಶ್ರೀ ದಿವ್ಯಜ್ಞಾನಾ ನಂದಗಿರಿ ಸ್ವಾಮೀಜಿಯವರ ದಿವ್ಯಸಾನ್ನಿಧ್ಯದಲ್ಲಿ ಜರುಗಲಿದೆ.