ದಾವಣಗೆರೆ, ಆ.23- ಜಿಲ್ಲೆಯಲ್ಲಿ ಅನಧಿಕೃತ ಪರವಾನಿಗೆ ಪಡೆಯದೇ ಚೀಟಿ ಗುಂಪು ನಡೆಸುವ ಚೀಟಿ ಸಂಸ್ಥೆಗಳ ವಿರುದ್ದ ಕ್ರಮ ಜರುಗಿಸಲಾ ಗುವುದು. ಅನಧಿಕೃತ ಚೀಟಿ ವ್ಯವಹಾರ ನಡೆಸುತ್ತಿರುವುದು ಹಾಗೂ ಸಾರ್ವ ಜನಿಕರಿಗೆ ಮೋಸ ಮಾಡುತ್ತಿರುವ ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿರುವು ದರಿಂದ ಅನಧಿಕೃತವಾಗಿ ಚೀಟಿ ವ್ಯವಹಾರ ನಡೆಸುವುದು ಕಾನೂನು ಬಾಹಿರವಾಗಿದ್ದು, ಸಾರ್ವಜನಿಕರು ಅನಧಿಕೃತ ಚೀಟಿ ಸಂಸ್ಥೆಗಳು ಅಥವಾ ವ್ಯಕ್ತಿಗಳೊಂದಿಗೆ ವ್ಯವಹರಿಸಿ ಮೋಸ ಹೋಗಬಾರದು. ಅಧಿಕೃತ ಚೀಟಿ ಸಂಸ್ಥೆಗಳಲ್ಲಿ, ಸಂಸ್ಥೆಯು ನಡೆಸುತ್ತಿರುವ ಚೀಟಿ ಗುಂಪುಗಳಿಗೆ ಸಂಬಂಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆದಿರುವ ಬಗ್ಗೆ ಸಂಸ್ಥೆಯಿಂದ ಮಾಹಿತಿ ಪಡೆದು ಖಚಿತಪಡಿಸಿಕೊಂಡು ಅಧಿಕೃತವಾಗಿ ವ್ಯವಹರಿಸಬೇಕೆಂದು ಸಹಕಾರ ಸಂಘಗಳ ಉಪ ನಿಬಂಧಕರಾದ ಹೆಚ್.ಅನ್ನಪೂರ್ಣ ತಿಳಿಸಿದ್ದಾರೆ.
January 16, 2025