ದಾವಣಗೆರೆ, ಆ.22- ಇದೇ ದಿನಾಂಕ 29 ರಂದು ಮೇಜರ್ ದ್ಯಾನ್ಚಂದ್ ಅವರ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತಿದ್ದು, ಸ್ಥಳೀಯ ಪ್ರಚಲಿತ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.
ಷಟಲ್ ಬ್ಯಾಡ್ಮಿಂಟನ್ ಕ್ರೀಡೆಯನ್ನು ಇದೇ ದಿನಾಂಕ 24 ರಂದು ನಗರದ ಶ್ರೀ ನೇತಾಜಿ ಸುಭಾಷ್ ಚಂದ್ರಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿ ದ್ದು, ಬೆಳಿಗ್ಗೆ 9 ಗಂಟೆಗೆ ವರದಿ ಮಾಡಿಕೊಳ್ಳಬೇಕು (ಶ್ರೀಶೈಲ ಎಸ್ ಮೊ.ನಂ: 9448667255)
ರಸ್ತೆ ಓಟ (ಪುರುಷ-6ಕಿ.ಮೀ) (ಮಹಿಳೆ–3ಕಿ.ಮೀ) ಕ್ರೀಡೆ ಇದೇ ದಿನಾಂಕ 25 ರಂದು ಜಿಲ್ಲಾ ಕ್ರೀಡಾಂಗಣದಿಂದ ಪ್ರಾರಂಭವಾಗುತ್ತದೆ. ಬೆಳಿಗ್ಗೆ 7.30 ಗಂಟೆಗೆ ವರದಿ ಮಾಡಿಕೊಳ್ಳಬೇಕು. (ವಿನೋದ್ಕುಮಾರ್. ಕೆ. ಮೊ.ನಂ: 8971388143)
ಹಗ್ಗ ಜಗ್ಗಾಟ ಕ್ರೀಡೆಯನ್ನು ಆಗಸ್ಟ್ 29 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದು, ಬೆಳಿಗ್ಗೆ 7.30 ಗಂಟೆಗೆ ವರದಿ ಮಾಡಿಕೊಳ್ಳಬೇಕು. (ರಾಮಲಿಂಗಪ್ಪ. ಜೆ. ಮೊ.ನಂ: 9480796263)
ಖೋ-ಖೋ ಕ್ರೀಡೆಯನ್ನು ಆಗಸ್ಟ್ 29 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದು, ಬೆಳಿಗ್ಗೆ 9.30 ಗಂಟೆಗೆ ವರದಿ ಮಾಡಿಕೊಳ್ಳಬೇಕು (ಸುನೀತಾ ಎಂ.ಸಿ. ಮೊ.ನಂ: 9972464313)
ಕ್ರೀಡೆಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಯಾವುದೇ ವಯೋಮಿತಿ ಇರುವುದಿಲ್ಲ. ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಕ್ರೀಡೆಗಳನ್ನು ಸಂಘಟಿಸಲಾಗುವುದು ಎಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶ್ರೀಹರ್ಷ ತಿಳಿಸಿದ್ದಾರೆ.