ನರಸರಾಜ ರಸ್ತೆಯಲ್ಲಿರುವ ಪಾರ್ಶ್ವನಾಥ ದಿಗಂಬರ ಜೈನ್ ಮಂದಿರದಲ್ಲಿ ಸಮಸ್ತ ದಿಗಂಬರ ಜೈನ ಸಮಾಜ ಹಾಗೂ ಮಹಾವೀರ್ ಯುವ ಮಂಚ್ ನೇತೃತ್ವದಲ್ಲಿ, ಸ್ವಾಮಿಯ (ಮೋಕ್ಷ ಕಲ್ಯಾಣ ) ಮುಕುಟ ಸಪ್ತಮಿ ಅಂಗವಾಗಿ ಇಂದು ಮುಂಜಾನೆ ಧ್ವಜಾರೋಹಣ, ಪಾರ್ಶ್ವನಾಥ ತೀರ್ಥಂಕರಿಗ ಜಲಾಭಿಷೇಕ, ಕ್ಷೀರಾಭಿಷೇಕ, ಗಂಧಾಭಿಷೇಕ, ಎಳನೀರು ಅಭಿಷೇಕ, ಕಷಾಯಾಭಿಷೇಕ ಹಾಗೂ 54 ಕಳಸ ಅಭಿಷೇಕ ನಂತರ ಸ್ವಾಮಿಗೆ ನಿರ್ವಾಣ ಲಾಡು ಸಮರ್ಪಣೆ ಮಾಡಲಾಗುವುದು. ಹಾಗೂ ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
December 22, 2024