ನಗರದಲ್ಲಿ ನಾಳೆ ಉಚಿತ ಹೃದಯ ಸಮಾಲೋಚನೆ, ತಪಾಸಣೆ

ದಾವಣಗೆರೆ, ಆ. 4- ನಗರದ ಎಂ.ಸಿ.ಕಾಲೋನಿ `ಬಿ’ ಬ್ಲಾಕ್ 9ನೇ ಕ್ರಾಸ್‌ನಲ್ಲಿರುವ ದಾವಣಗೆರೆ ಹಾರ್ಟ್ ಆಸ್ಪತ್ರೆಯಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಾಡಿದ್ದು ದಿನಾಂಕ 6ರ ಭಾನುವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2ರವರೆಗೆ ಉಚಿತ ಹೃದಯ  ಸಮಾಲೋಚನೆ ಕಾರ್ಯಕ್ರಮ ನಡೆಯಲಿದೆ.

ಉಚಿತ ಇಸಿಜಿ, ಇಸಿಹೆಚ್‌ಓ ಹಾಗೂ ಮಕ್ಕಳ ಹೃದಯ ರೋಗಕ್ಕೆ ಉಚಿತ ಶಸ್ತ್ರ ಚಿಕಿತ್ಸೆ ನಡೆಸಲಾಗುವುದು. ಸಮಾಲೋಚನೆಯಲ್ಲಿ ಹೃದ್ರೋಗ ತಜ್ಞ ಡಾ.ಕೆ.ಎಸ್. ಸಂತೋಷ್‌ ಕುಮಾರ್ ಹಾಗೂ ಹೃದಯ ಶಸ್ತ್ರ ಚಿಕಿತ್ಸಕರಾದ ಡಾ. ಸಾಯಿ ಸೂರಜ್ ಉಪಸ್ಥಿತರಿರುವರು. ವಿವರಕ್ಕೆ ಸಂಪರ್ಕಿಸಿ : 63609 67090 / 93538 99577.

error: Content is protected !!