ದಾವಣಗೆರೆ, ಜು.8- ಬಸವಾಪಟ್ಟಣ ಪೊಲೀಸ್ ಠಾಣಾ ಸರಹದ್ದಿನ ಕಬ್ಬಳ ಗ್ರಾಮದಲ್ಲಿ, ಮನೆಯ ಪಕ್ಕದಲ್ಲಿನ ಖಾಲಿ ನಿವೇಶನದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ಆರೋಪದ ಮೇಲೆ ಚಂದ್ರನಾಯ್ಕ ಎಂಬಾತನ್ನು ವಶಕ್ಕೆ ಪಡೆದು, ಸ್ಥಳದಲ್ಲಿ ಬೆಳೆದಿದ್ದ ಒಟ್ಟು 3 ಕೆ.ಜಿ. ತೂಕದ 10 ಹಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಿ.ಎಸ್.ಐ ವೀಣಾ ಹೆಚ್. ನೇತೃತ್ವದಲ್ಲಿ ಸಿಬ್ಬಂದಿಗಳಾದ ಅಣ್ಣೇಶ್, ಪ್ರಕಾಶ್, ಇಬ್ರಾಹಿಂ, ರವೀಂದ್ರ ವೈ.ಹೆಚ್, ಆಂಜನೇಯ ಅವರುಗಳು ಸ್ಥಳಕ್ಕೆ ತೆರಳಿ ವಶಕ್ಕೆ ಪಡೆದಿದ್ದಾರೆ.
December 23, 2024