ದಾವಣಗೆರೆ ವಿವಿಯಲ್ಲಿ ಇಂದು ರೈತರಿಗೆ ಪುನಶ್ಚೇತನ ತರಬೇತಿ

ಜಲ ಸಂಪನ್ಮೂಲ ಇಲಾಖೆಯ ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ವತಿಯಿಂದ ಭದ್ರಾ ಅಚ್ಚುಕಟ್ಟು ಪ್ರದೇಶದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ಹಾಗೂ ಸದಸ್ಯರುಗಳಿಗೆ ಪುನಶ್ಚೇತನ ತರಬೇತಿ ಕಾರ್ಯಕ್ರಮವನ್ನು ಇಂದು ಏರ್ಪಡಿಸಲಾಗಿದೆ.

ದಾವಣಗೆರೆ ವಿಶ್ವವಿದ್ಯಾನಿಲಯದ ಆವರಣದ ಹೊಸ ಸಮಾಜ ವಿಜ್ಞಾನ ಕಟ್ಟಡದಲ್ಲಿ ಬೆಳಿಗ್ಗೆ 10 ಗಂಟೆಗೆ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ನೀರು ನಿರ್ವಹಣೆಯ ವಿವಿಧ ವಿಷಯಗಳ ಕುರಿತು ರೈತರೊಂದಿಗೆ ಸಂವಾದ ನಡೆಯಲಿದೆ. ವಾಲ್ಮಿ ಸಮಾಲೋಚಕ ಸುರೇಶ ಕುಲಕರ್ಣಿ ಅವರು ನೀರು ಬಳಕೆದಾರರ ಸಹಕಾರ ಸಂಘಗಳ ರಚನೆ, ಕಾನೂನು, ಕಾಯ್ದೆಗಳು ಹಾಗೂ ಸಂಘಗಳ ಬಲವರ್ಧನೆ ಕುರಿತು ಮಾತನಾಡಲಿದ್ದಾರೆ.

ವಾಲ್ಮಿ ಸಹಪ್ರಾಧ್ಯಾಪಕ ಬಿ.ಎಚ್.ಪೂಜಾರ ವಾರಾಬಂದಿ ಹಾಗೂ ನೀರು ನಿರ್ವಹಣೆ ಕುರಿತು, ಸಮಾಲೋಚಕ ವಿ.ಐ.ಬೆಣಗಿ ಅವರು ವಿವಿಧ ಬೆಳೆಗಳ ನಿರ್ವಹಣೆ ಹಾಗೂ ಮಣ್ಣು ಮತ್ತು ಬೆಳೆಗಳ ಸಂರಕ್ಷಣೆ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಕಾರ್ಯಕ್ರಮ ಸಂಯೋಜಕ ವಾಲ್ಮಿ ಸಹ ಪ್ರಾಧ್ಯಾಪಕ ಹನುಮಂತಪ್ಪ, ಸಹಸಂಯೋಜಕ ಫಕ್ಕೀರೇಶ ಅಗಡಿ ತಿಳಿಸಿದ್ದಾರೆ.

error: Content is protected !!