ವಸತಿ ಶಾಲೆಗಳಲ್ಲಿ ಖಾಲಿ ಇರುವ 7, 8 ಮತ್ತು 9 ನೇ ತರಗತಿ ಪ್ರವೇಶಕ್ಕೆ ಅರ್ಜಿ

ದಾವಣಗೆರೆ, ಜೂ. 22 – ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ವ್ಯಾಪ್ತಿಯ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಇಂದಿರಾ ಗಾಂಧಿ ಮತ್ತು ಡಾ. ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಗಳಲ್ಲಿ ಖಾಲಿ ಇರುವ 7, 8 ಮತ್ತು 9 ನೇ ತರಗತಿಗಳಿಗೆ ಪ್ರವೇಶಾತಿ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಒಟ್ಟು 20 ಸ್ಥಾನಗಳಿದ್ದು, 7 ನೇ ತರಗತಿಗೆ ಪ.ಜಾ (3) ಮತ್ತು ಪ.ಪಂ.(2) ದ ಒಟ್ಟು 5 ಹೆಣ್ಣು ಮಕ್ಕಳು, 8 ನೇ ತರಗತಿಗೆ ಪ.ಜಾ (1) ಮತ್ತು ಒಬಿಸಿ(2) ವರ್ಗದ ಒಟ್ಟು 3 ಹೆಣ್ಣು ಮಕ್ಕಳು ಮತ್ತು 9 ನೇ ತರಗತಿಗೆ ಪ.ಜಾ(3) , ಪ.ಪಂ(3), ಒಬಿಸಿ(4) ಹೆಣ್ಣು ಹಾಗೂ ಪ.ಪಂ(1) ಮತ್ತು ಒಬಿಸಿ(1) ವರ್ಗದ ಗಂಡು ಮಕ್ಕಳು ಸೇರಿದಂತೆ ಒಟ್ಟು 12 ಸ್ಥಾನಗಳ ಪ್ರವೇಶಗಳಿಗೆ ಅರ್ಜಿ ಕರೆಯಲಾಗಿದೆ.

ಆಸಕ್ತರು ಹತ್ತಿರದ ಮೊರಾರ್ಜಿ ದೇಸಾಯಿ, ಇಂದಿರಾ ಗಾಂಧಿ ವಸತಿ ಶಾಲೆಗಳು ಮತ್ತು ಜಿಲ್ಲಾಡಳಿತ ಭವನದ ಕೊಠಡಿ ಸಂ : 37 ರಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಉಪನಿರ್ದೇಶಕರಾದ ನಾಗರಾಜ್ ತಿಳಿಸಿದ್ದಾರೆ.

error: Content is protected !!