ರಾಣೆಬೆನ್ನೂರು, ಜೂ. 7 – ಇಲ್ಲಿನ ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ (ಎನ್.ಪಿ.ಎಸ್.) ಕಂಪ್ಯೂಟರ್ ಕೋಡಿಂಗ್ ಶಿಕ್ಷಣಕ್ಕೆ ಚಾಲನೆ ನೀಡಲಾಗಿದೆ. ಯು.ಒ.ಎಲ್.ಒ. – ಟೆಕಿ ಸಂಸ್ಥೆ ಸಹಭಾಗಿ ತ್ವದಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ತಂತ್ರಜ್ಞಾನ ನಮ್ಮ ಜೀವನಕ್ಕೆ ಅತ್ಯಗತ್ಯ ವಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಕೋಡಿಂಗ್ ಕಲಿಯುವ ಅಗತ್ಯವಿದೆ ಎಂದು ಶಾಲೆಯ ಪ್ರಾಂಶುಪಾಲ ಪ್ರಕಾಶ್ ಸಂಗೈ ತಿಳಿಸಿದ್ದಾರೆ.
1ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಕೋಡಿಂಗ್ ಕಲಿಸಲು ವಿಶೇಷ ರೀತಿಯಲ್ಲಿ ಕಂಪ್ಯೂಟರ್ ರೂಪಿಸಲಾಗಿದೆ ಎಂದು ಶಾಲೆಯ ಅಧ್ಯಕ್ಷ ವಾಸುದೇವ ಸಾ ಲಾದ್ವಾ ತಿಳಿಸಿದ್ದಾರೆ.