ಪತ್ರಕರ್ತರ ಚಿಕಿತ್ಸೆಗೆ ಅಣಬೇರು ರಾಜಣ್ಣ ನೆರವು

ಪತ್ರಕರ್ತರ ಚಿಕಿತ್ಸೆಗೆ ಅಣಬೇರು ರಾಜಣ್ಣ ನೆರವು - Janathavaniದಾವಣಗೆರೆ, ಜೂ.5- ಪತ್ರಕ ರ್ತರ ಮೇಲೆ ಸಾಕಷ್ಟು ಜವಾಬ್ದಾರಿ, ಹೊಣೆಗಾರಿಕೆ ಇದ್ದು, ಸುದ್ದಿಯ ಒತ್ತಡಗಳ ಮಧ್ಯೆಯೂ ನೈಜ ಸುದ್ದಿ ನೀಡುವ ಕೆಲಸ ಆಗಬೇಕು ಎಂದು ಅಪೂರ್ವ ಹೋಟೆಲ್ ಸಮೂಹಗಳ ಮುಖ್ಯಸ್ಥರೂ ಆದ ಹಿರಿಯ ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ ತಿಳಿಸಿದರು. 

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಶಿವ ಧ್ಯಾನ ಮಂದಿರದಲ್ಲಿ ನಿನ್ನೆ ಏರ್ಪಾಡಾಗಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಪತ್ರಕರ್ತರು, ಪತ್ರಿಕಾ ರಂಗದಲ್ಲಿ ಕೆಲಸ ಮಾಡವವರನ್ನು ಗುರುತಿಸಿ, ಗೌರವಿಸುವ ಕೆಲಸ ಮಾಡುತ್ತಿರುವ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯ ಇತರರಿಗೂ ಪ್ರೇರಣೆ ಎಂದು ಅವರು ಶ್ಲ್ಯಾಘಿಸಿದರು. 

ಅನಾರೋಗ್ಯದಿಂದಿರುವ ಪತ್ರಕರ್ತರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆರ್ಥಿಕ ನೆರವು ನೀಡುವ ಮಾನವೀಯ ಕಾರ್ಯ ಇತರರಿಗೂ ಸ್ಫೂರ್ತಿ ನೀಡುತ್ತದೆ. ತಾವೂ ಸಹ ಆರೋಗ್ಯದ ವಿಚಾರದಲ್ಲಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪತ್ರಕರ್ತರ ನೆರವಿಗಾಗಿ 20 ಸಾವಿರ ರೂ.ಗಳನ್ನು ನೀಡುವುದಾಗಿ ರಾಜಣ್ಣ ತಿಳಿಸಿದರು. 

ಒತ್ತಡದಲ್ಲೇ ಸದಾ ಕಾರ್ಯ ನಿರ್ವಹಿಸುವ ಪತ್ರಕರ್ತರು ತಮ್ಮ ಆರೋಗ್ಯದ ಕಡೆಗೂ ಗಮನ ಹರಿಸಬೇಕು ಎಂದು ಅಣಬೇರು ರಾಜಣ್ಣ ಸಲಹೆ ನೀಡಿದರು.

error: Content is protected !!