ನಗರದಲ್ಲಿ ಇಂದು ಸಚಿವ ಎಸ್ಸೆಸ್ಸೆಂ ಬೃಹತ್ ರೋಡ್ ಷೋ

ನಗರದಲ್ಲಿ ಇಂದು ಸಚಿವ ಎಸ್ಸೆಸ್ಸೆಂ ಬೃಹತ್ ರೋಡ್ ಷೋ - Janathavaniಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ  ಇಂದು ಬೃಹತ್ ರೋಡ್ ಷೋ ನಡೆಸುವರು. 

ಮಧ್ಯಾಹ್ನ 3 ಗಂಟೆಗೆ ವೀರ ಮದಕರಿ ನಾಯಕ ವೃತ್ತದಿಂದ ರೋಡ್ ಷೋ ಆರಂಭವಾಗಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ,  ತಿಳಿಸಿದ್ದಾರೆ. ಮೆರವಣಿಗೆ ವೀರ ಮದಕರಿ ನಾಯಕ ವೃತ್ತದಿಂದ ಆರಂಭಗೊಂಡು  ದುರ್ಗಾಂಬಿಕ ದೇವಸ್ಥಾನದ ಬಳಿ ಶಿವಾಜಿ ವೃತ್ತ, ಹಗೇದಿಬ್ಬ ಸರ್ಕಲ್, ಆಜಾದ್‍ನಗರ ಮುಖ್ಯರಸ್ತೆ, ಅಖ್ತರ್ ರಜ್ಹಾ ಸರ್ಕಲ್, ಬಾಷಾ ನಗರ, ಮಾಗಾನಹಳ್ಳಿ ರಸ್ತೆ, ಅರಳಿಮರ ಸರ್ಕಲ್, ವೆಂಕಟೇಶ್ವರ ಸರ್ಕಲ್‍ಗೆ ಮುಕ್ತಾಯವಾಗಲಿದೆ. ಮೆರವಣಿಗೆಯಲ್ಲಿ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ  ಜನಪ್ರತಿನಿಧಿಗಳು ಭಾಗವಹಿಸುವರು.

error: Content is protected !!