ಗ್ರಾಮೀಣ ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ

ದಾವಣಗೆರೆ, ಜೂ.4-  ತೋಳಹುಣಸೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಹಳೇ ತೋಳಹುಣಸೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಗ್ರಾಮೀಣ ಮಟ್ಟದ ಯುವಕ/ಯುವತಿಯರಿಗಾಗಿ  ಮೊಬೈಲ್ ರಿಪೇರಿ, ಎಲೆಕ್ಟ್ರಿಕ್ ಮೋಟಾರ್  ರಿಪೇರಿ, ಪೋಟೋಗ್ರಫಿ, ವೀಡಿಯೋಗ್ರಫಿ ಕೌಶಲ್ಯ  ತರಬೇತಿ ನಡೆಯಲಿದೆ.

 30 ದಿನಗಳ ಈ ತರಬೇತಿಗೆ 18 ರಿಂದ 45 ವಯೋಮಿತಿಯ ಅಭ್ಯರ್ಥಿಗಳು  ಅರ್ಜಿ ಸಲ್ಲಿಸಬಹುದು. ವಿವರಕ್ಕೆ ಸಂಪರ್ಕಿಸಿ : 7975139332, 7019980484, 9964111314,9483386143, 9538395817.

error: Content is protected !!