ಹೊನ್ನಾಳಿ : ಪಂಚಮಸಾಲಿ ಸಮಾಜದಿಂದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ

ಹೊನ್ನಾಳಿ : ಪಂಚಮಸಾಲಿ ಸಮಾಜದಿಂದ   ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ

ಹೊನ್ನಾಳಿ, ಜೂ.4- ಸಮಾಜದ ವಿವಿಧ ಕ್ಷೇತ್ರಗಳ ಸಾಧಕರು ಹಾಗು ಪ್ರತಿಭಾನ್ವಿತ ವಿದ್ಯಾರ್ಥಿಗಳ ಸಾಧನೆ ಗುರುತಿಸಿ ಸಮಾಜವು ಸನ್ಮಾ ನಿಸಿ ಪ್ರೋತ್ಸಾಹಿಸುವ ಮೂಲಕ ಅವರಿಂದ ಇನ್ನೂ ಹೆಚ್ಚು ಸಾಧನೆ ಹೊರಹೊಮ್ಮಲು ಸಾಧ್ಯವಾಗಲಿದೆ ಎಂದು ಪಂಚಮಸಾಲಿ ಸಮಾಜದ ತಾಲ್ಲೂಕು ಗೌರವಾಧ್ಯಕ್ಷ ಡಾ. ರಾಜಕುಮಾರ ಹೇಳಿದರು.

ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿಂದು ನಡೆದ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವೀರಶೈವ ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಸಮಾಜದ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಆತ್ಮವಿಶ್ವಾಸ ಹಾಗು ಭರವಸೆಯ ಕೊರತೆಯಿಂ ದಾಗಿಯೇ ಸಾಧನೆಗೆ ಅಡ್ಡಿ ಎಂಬುದನ್ನು  ಕೆಲವರು ಅರಿತು ತಮ್ಮ ನಿರ್ಧಿಷ್ಟ ಗುರಿ ಸಾಧನೆ ತಲುಪಲು ಮುಂದಾಗಬೇಕೆಂದು ಅವರು ಸಲಹೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆನಕನಹಳ್ಳಿ ಪಟ್ಟಣಶೆಟ್ಟಿ ವೀರಪ್ಪನವರು, ಈ ಸಮಾರಂಭವನ್ನು ಮತ್ತಷ್ಟು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಮಾಜದ ಗೌರವಾಧ್ಯಕ್ಷ ಡಾ. ರಾಜಕುಮಾರರವರನ್ನು ಒಳಗೊಂಡ ಎಲ್ಲಾ ಸಮಿತಿ ಸದಸ್ಯರೊಂದಿಗೆ ಚರ್ಚಿಸಿ ಈ ಸಮಾರಂಭವನ್ನು ನಡೆಸಲು ಮುಂದಾಗಿದ್ದನ್ನು ವಿವರಿಸಿ, ಸಮಾಜದ ವಿದ್ಯಾರ್ಥಿಗಳು ಇನ್ನು ಹೆಚ್ಚಿನ ಮಟ್ಟದ ವಿದ್ಯಾಭ್ಯಾಸ ಮಾಡುವಂತೆ ಸಲಹೆ ನೀಡಿದರು.

ಸಮಾರಂಭದಲ್ಲಿ ಹೊಳೆಸಿರಿಗೆರೆ ಎನ್.ಜಿ. ನಾಗನಗೌಡ್ರು ಹಾಗು ರಾಜ್ಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ವಾಣಿ ಗುರು ಇವರು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಮಾಜದ ಮುಖಂಡರಾದ ಕೆ. ಬೆನಕಪ್ಪ, ಹಾಲಪ್ಪ ಪಟ್ಟಣಶೆಟ್ಟಿ, ಕಾಯಿ ಬೆನಕಪ್ಪ,  ಕೆ.ವಿ.  ಪ್ರಸನ್ನ, ನಾಗಮ್ಮ ಎಸ್, ವೀರೇಶ್ ಬೆಳಗುತ್ತಿ, ಇಡ್ಲಿ ರುದ್ರಪ್ಪ, ವಿಜಯಮ್ಮ, ಚಂದ್ರಶೇಖರಪ್ಪ ಕುಂಕೋದ ಅವರುಗಳನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.

ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಕೆ.ಯು. ಮಂಜೇಶ್ವರ ಹಾಗು ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮಂಗಳಾ, ಎನ್.  ಬಸವರಾಜ್ ನೆರವೇರಿಸಿದರು.

ಸಮಾರಂಭದಲ್ಲಿ ಅತಿಥಿಗಳಾಗಿ ಪರಮೇಶ್ ಪಟ್ಟಣಶೆಟ್ಟಿ, ನ್ಯಾಮತಿ ವಾಗೀಶ್, ದಾವಣಗೆರೆ ಕಾಶಿನಾಥ, ಹಾಲೇಶ ಕುಂಕೊದ್, ಕೆ.ವಿ. ಪ್ರಸನ್ನ, ನಾಗಮ್ಮ ಎಸ್, ಒಡೆಯರಹತ್ತೂರು ಅಶೋಕ ಇವರುಗಳು ಮಾತನಾಡಿದರು.

ಅತಿಥಿಗಳಾಗಿ ತಾಲ್ಲೂಕು ಮಹಿಳಾ
 ಅಧ್ಯಕ್ಷೆ ಶಿಲ್ಪಾ ರಾಜುಗೌಡ, ಎನ್‌.ಡಿ. ಪಂಚಾಕ್ಷರಪ್ಪ, ಯುವ ಘಟಕದ ಅಧ್ಯಕ್ಷ ಹಾಲೇಶ್ ಕೆ.ಎನ್,
ನಗರ ಘಟಕದ ಅಧ್ಯಕ್ಷ ಹೆಚ್‌.ಪಿ. ಗಿರೀಶ ಭಾಗವಹಿಸಿದ್ದರು.

error: Content is protected !!