ಬಿಐಇಟಿ ಆವರಣದಲ್ಲಿರುವ ಎಸ್.ಎಸ್.ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುವುದು. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತಿತರರ ಸಹಯೋಗ ದಲ್ಲಿ ಆಯೋಜಿಸಲಾದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಉದ್ಘಾಟಿಸುವರು. ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರಣ್ಣವರ ಅಧ್ಯಕ್ಷತೆ ವಹಿಸುವರು. ಬಿಐಇಟಿ ಪ್ರಾಂಶುಪಾಲ ಡಾ.ಹೆಚ್.ಬಿ ಅರವಿಂದ್ ವಿಷಯ ತಜ್ಞ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಸುರೇಶ ಬಿ. ಹಿಟ್ನಾಳ್, ಡಾ.ಅರುಣ್ ಕುಮಾರ್, ಎಲ್.ಹೆಚ್ ಅರುಣ್ ಕುಮಾರ್, ರಮೇಶ ಡಿ.ನಾಯಕ್, ಜಿ.ಆರ್ ತಿಪ್ಪೇಶಪ್ಪ, ಡಾ. ಹೆಚ್ ಲಕ್ಷ್ಮೀಕಾಂತ್, ಡಾ. ಎಸ್.ಸುರೇಶ, ಪ್ರೊ. ವೃಷಭೇಂದ್ರಪ್ಪ ಆಗಮಿಸುವರು
January 16, 2025