ರಾಣೇಬೆನ್ನೂರು, ಮೇ 26- ಅಜಾಗರೂಕತೆಯಿಂದ ಲಾರಿ ಚಾಲನೆ ಮಾಡಿ ಅಭಿಷೇಕ ಮಠದ ಸಾವಿಗೆ ಕಾರಣನಾದ ಆರೋಪಿ ಲಿಂಗದಹಳ್ಳಿಯ ಹನುಮಂತಪ್ಪ ಬಾರ್ಕಿ ಅವನಿಗೆ ಇಲ್ಲಿನ ನ್ಯಾಯಾಲಯ ದಂಡ ಹಾಗೂ ಶಿಕ್ಷೆಯ ತೀರ್ಪು ನೀಡಿದೆ.
2018 ರಲ್ಲಿ ನಡೆದ ಈ ಘಟನೆಯನ್ನು ಅಂದಿನ ಪೊಲೀಸ್ ಅಧಿಕಾರಿ ಮಂಜುನಾಥ ನಲವಾಗಲ ಅವರು ಮೊಕದ್ದಮೆ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾದೀಶೆ ಅನಿತಾ ಓ.ಎ. ತೀರ್ಪು ನೀಡಿದ್ದಾರೆ. ಸರ್ಕಾರಿ ವಕೀಲ ಸಂತೋಷಕುಮಾರ್ ಅವರು ಅನ್ಯಾಯಕ್ಕೊಳಗಾದವರ ಪರವಾಗಿ ವಾದ ಮಂಡಿಸಿದ್ದರು.