ಸಾದರ ಸಾಧನ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ದಾವಣಗೆರೆ, ಮೇ 25- 2022-23 ನೇ ಸಾಲಿನ ಎಸ್ಸೆಸ್ಸೆಲ್ಸಿ (ಸ್ಟೇಟ್, ಸಿಬಿಎಸ್ಇ, ಐಸಿಎಸ್‌ಇ) ಪಿಯುಸಿ ವಿಜ್ಞಾನ, ಕಲಾ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಶೇ. 85 ಕ್ಕೂ ಹೆಚ್ಚು ಅಂಕ ಗಳಿಸಿದ ಸಾಧು ಲಿಂಗಾಯತ ಸಮಾಜದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಕರ್ನಾಟಕ ರಾಜ್ಯ ಮಟ್ಟದ ಸಾಧು ಲಿಂಗಾಯತ ಸಮಾಜ ಪ್ರತಿಭಾ ಪುರಸ್ಕಾರ ನೀಡಲು ಸಾದರ ನೌಕರರ ಬಳಗ  ಮುಂದಾಗಿದೆ. ಆಸಕ್ತ ಸಾಧು ಲಿಂಗಾಯತ ಸಮಾಜದ ವಿದ್ಯಾರ್ಥಿಗಳು ಇದೇ ದಿನಾಂಕ 31 ರೊಳಗಾಗಿ ಅರ್ಜಿಯನ್ನು  ಕೆ. ನಾಗಪ್ಪ, ಅಧ್ಯಕ್ಷರು, ಸಾದರ ನೌಕರರ ಬಳಗ, ಸಾದರ ಪತ್ತಿನ ಸಹಕಾರ ಬ್ಯಾಂಕ್, ಡೋರ್ ನಂ. 1645/145, ವಿದ್ಯಾನಗರ ಮುಖ್ಯರಸ್ತೆ, ದಾವಣಗೆರೆ ಇವರಿಗೆ ಸಲ್ಲಿಸಬೇಕು.

ವಿವರಕ್ಕೆ ಸಂಪರ್ಕಿಸುವ ಮೊಬೈಲ್ : 9844369744, 94484 39662, 9844501366, 9243312478, 9886339984.

error: Content is protected !!