ನಗರದಲ್ಲಿಂದು ಪ್ರತಿಜ್ಞಾ ವಿಧಿ ಸ್ವೀಕಾರ

ಎಸ್‌.ಎಸ್‌. ಇನ್‌ಸ್ಟಿಟ್ಯೂಟ್‌ ವತಿಯಿಂದ 19ನೇ ಬ್ಯಾಚ್‌ನ ಬಿ.ಎಸ್ಸಿ. ನರ್ಸಿಂಗ್‌ ಮತ್ತು ಜಿಎನ್‌ಎಂ ವಿದ್ಯಾರ್ಥಿಗಳ ದೀಪ ಬೆಳಗುವ ಮತ್ತು ಪ್ರತಿಜ್ಞಾ ವಿಧಿ ಕಾರ್ಯಕ್ರಮ ಇಂದು ಬೆಳಿಗ್ಗೆ 10.30 ಕ್ಕೆ ಎಸ್‌ಎಸ್‌ಐಎಂಎಸ್‌ ಮತ್ತು ಆರ್‌ಸಿ ಆಸ್ಪತ್ರೆ ಸಭಾಂಗಣದಲ್ಲಿ ನಡೆಯಲಿದೆ. 

ಮುಖ್ಯ ಅತಿಥಿಗಳಾಗಿ ಡಾ. ಪ್ರಭಾ ಮಲ್ಲಿಕಾರ್ಜುನ್ ಮತ್ತು ಡಾ. ಅರುಣ್‌ಕುಮಾರ್‌ ಅಜ್ಜಪ್ಪ ಆಗಮಿಸುವರು. ಕಾರ್ಯಕ್ರಮದಲ್ಲಿ ಶ್ರೀಮತಿ ಪ್ರಭಾ ಕಳಸ್‌ ಗೌರವಾನ್ವಿತ ಅತಿಥಿಗಳಾಗಿರುತ್ತಾರೆ. ಪ್ರಾಂಶುಪಾಲ ವೀರೇಶ್‌ ವಿ.ಬಿ. ಅಧ್ಯಕ್ಷತೆ ವಹಿಸುವರು. ಸಂಜೆ 5.30 ಕ್ಕೆ ಎಸ್‌.ಎಸ್‌.ಐ.ಎನ್‌.ಎಸ್‌. ಕಾಲೇಜಿನ ಹಿಂಭಾಗದಲ್ಲಿರುವ ಹೊರಾಂಗಣ ಸಭಾಂಗಣದಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ನಡೆಯುವುದು.

ಮುಖ್ಯ ಅತಿಥಿಗಳಾಗಿ ಸಂಪಣ್ಣ ಮುತಾಲಿಕ್‌ ಹಾಗೂ ಎಸ್‌ಎಸ್‌ಐಎಂಎಸ್‌  ಮತ್ತು ಆರ್‌ಸಿ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎಸ್‌. ಪ್ರಸಾದ್‌ ಆಗಮಿಸುವರು. ಅಧ್ಯಕ್ಷತೆಯನ್ನು ಪ್ರಾಂಶುಪಾಲ ವೀರೇಶ್ ವಿ.ಬಿ. ವಹಿಸುವರು. 

error: Content is protected !!