ರಾಣೇಬೆನ್ನೂರು: ಬಿಎಜೆಎಸ್ಎಸ್‌ಗೆ ಬಿ+ ಮಾನ್ಯತೆ ನೀಡಿದ ನ್ಯಾಕ್

ರಾಣೇಬೆನ್ನೂರು ಮೇ 20- ಇಲ್ಲಿನ ಹಲಗೇರಿ ರಸ್ತೆಯಲ್ಲಿರುವ ಬಿಎಜೆಎಸ್ಎಸ್ ಮಹಿಳಾ ಮಹಾವಿದ್ಯಾಲಯಕ್ಕೆ ನ್ಯಾಕ್‌ನಿಂದ 2.71 ಸಿಜಿಪಿಎ ದೊಂದಿಗೆ  ಬಿ+ ಮಾನ್ಯತೆ ನೀಡಿದೆ.

ಕಳೆದ ವಾರ ಕಾಲೇಜಿಗೆ ಭೇಟಿ ನೀಡಿದ್ದ ನ್ಯಾಕ್  ತಂಡ ಕಾಲೇಜಿನ ಎಲ್ಲಾ ಸೌಲಭ್ಯಗಳೊಂದಿಗೆ ದಾಖಲಾತಿ ಪರಿಶೀಲಿಸಿ ಈ ಗ್ರೇಡ್ ನೀಡಿದ್ದು, ಇದಕ್ಕೆ ಸಂಸ್ಥೆಯ ಕಾರ್ಯದರ್ಶಿ  ಡಾ ಆರ್. ಎಂ. ಕುಬೇರಪ್ಪ, ಅಧ್ಯಕ್ಷ  ರುದ್ರಪ್ಪ ಲಮಾಣಿ, ಪ್ರಾಚಾರ್ಯ  ಡಾ. ಸುರೇಶ್ ಬಣಕಾರ್  ಹರ್ಷ ವ್ಯಕ್ತಪಡಿಸಿದ್ದಾರೆ.

error: Content is protected !!