ಹರಿಹರ, ಮೇ 20 – ತುಮಕೂರಿನ ಕೈಗಾರಿಕಾ ಇಂಜಿನಿಯರಿಂಗ್ ಮತ್ತು ನಿರ್ವಹಣೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಪಿ.ಎಂ.ನಾಗರಾಜ್ ಅವರಿಗೆ ಚೆನ್ನೈನ ಅಣ್ಣಾ ವಿಶ್ವವಿದ್ಯಾನಿಲಯ ಪಿಎಚ್‌ಡಿ ಪದವಿ ನೀಡಿದೆ.
ನಾಗರಾಜ್ ಅವರು ತಮಿಳುನಾಡಿನ ಕೊಯಮತ್ತೂರಿನ ಪಿಎಸ್‌ಜಿ ಕಾಲೇಜ್ ಆಫ್ ಟಿಕ್ನಾಲಜಿಯಲ್ಲಿ ಡಾ. ಎಂ. ಯುವರಾಜ ಅವರ ಮಾರ್ಗದರ್ಶನದಲ್ಲಿ ‘ಸೆಕೆಂಡರಿ ಲೋಡ್ ಬೇರಿಂಗ್ ಸ್ಟ್ರಕ್ಚಲರ್ ಅಪ್ಲಿಕೇಶನ್’ಗಳಿಗಾಗಿ ಸಸ್ಟೈನಬಲ್ ವಸ್ತುಗಳಿ೦ದ ಮಾಡಲ್ಪಟ್ಟ ಜೈವಿಕ – ಸಂಯೋಜಿತಗಳ ಅಭಿವೃದ್ಧಿ ಮತ್ತು ಗುಣಲಕ್ಷಣ ಪರೀಕ್ಷೆ ಎಂಬ ಪ್ರಬಂಧವನ್ನು ಮಂಡಿಸಿದ್ದರು. ಇವರು ಹರಿಹರ ತಾಲ್ಲೂಕಿನ ಹನಗವಾಡಿಯ ಮಲ್ಲೇಶಪ್ಪ ಪೂಜಾರ್ ಅವರ ಪುತ್ರ.