ರಾಣೇಬೆನ್ನೂರು : ರೋಟರಿ ಪದವಿಪೂರ್ವ ಮಹಾವಿದ್ಯಾಲಯಕ್ಕೆ ಶೇ. 90 ರಷ್ಟು ಫಲಿತಾಂಶ

ರಾಣೇಬೆನ್ನೂರು : ರೋಟರಿ ಪದವಿಪೂರ್ವ ಮಹಾವಿದ್ಯಾಲಯಕ್ಕೆ ಶೇ. 90 ರಷ್ಟು ಫಲಿತಾಂಶ - Janathavaniರಾಣೇಬೆನ್ನೂರು, ಮೇ 2- ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಲ್ಲಿನ  ಟ್ಯಾಗೋರ್ ಶಿಕ್ಷಣ ಸಂಸ್ಥೆಯ ರೋಟರಿ ಪದವಿಪೂರ್ವ ಮಹಾವಿದ್ಯಾಲಯಕ್ಕೆ ಶೇ. 90 ರಷ್ಟು ಫಲಿತಾಂಶ ಲಭಿಸಿದೆ.

ವಾಣಿಜ್ಯ ವಿಭಾಗದಲ್ಲಿ 62 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿದ್ದು 13 ಡಿಸ್ಟಿಂಕ್ಷನ್, 26 ಪ್ರಥಮ ಶ್ರೇಣಿ, 9 ದ್ವಿತೀಯ ಶ್ರೇಣಿ, 9 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಒಟ್ಟು ವಾಣಿಜ್ಯ ವಿಭಾಗದಲ್ಲಿ ಶೇ.93 ರಷ್ಟು ಫಲಿತಾಂಶ ಬಂದಿರುತ್ತದೆ.

ಆದರ್ಶ ಎ. ತಟಪಟ್ಟಿ, 585/600 (ಶೇ.97.5)ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಭೂಮಿಕಾ ಎನ್. ಮಾರನಾಳ 570/600 (ಶೇ.95) ಅಂಕ ಪಡೆದು ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಪೂಜಾ ಪ್ರಮೋದ ಚಾವಡಿಮನಿ 558/600 (ಶೇ.93) ಅಂಕ ಪಡೆದು  ತೃತೀಯ ಸ್ಥಾನ ಪಡೆದಿದ್ದಾರೆ.

ಅದೇ ರೀತಿ ವಿಜ್ಞಾನ ವಿಭಾಗದಲ್ಲಿ ಶೇ. 88% ರಷ್ಟು ಫಲಿತಾಂಶ ಬಂದಿರುತ್ತದೆ. 62 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿದ್ದು, 11 ಡಿಸ್ಟಿಂಕ್ಷನ್, 28 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 14 ದ್ವಿತೀಯ ಶ್ರೇಣಿ, 9 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ನಿಮಿಷಾಂಬ ಎಸ್.ಗುತ್ತಲ 550/600 (ಶೇ. 92) ಅಂಕ ಪಡೆದು ಕಾಲೇಜಿಗೆ ಪ್ರಥಮ, ಸುಮಿತ್ ಕೆ. ಮಾನೆ ಮತ್ತು ಚಿನ್ಮಯಿ ಬಿ.ಕೆ. 542/600 (ಶೇ. 90.2) ಅಂಕ ಗಳಿಸಿ ಕಾಲೇಜಿಗೆ ದ್ವಿತೀಯ, ಕಾರ್ತಿಕ ಬೋಗಾರ 541/600  (ಶೇ. 90) ಅಂಕ ಗಳಿಸಿ  ತೃತೀಯ ಸ್ಥಾನ ಪಡೆದಿರುತ್ತಾರೆ.

ಈ ಎಲ್ಲಾ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿಯ ಅಧ್ಯಕ್ಷ ಡಾ|| ಬಸವರಾಜ ಎಸ್. ಕೇಲಗಾರ, ಕಾರ್ಯದರ್ಶಿ ಕೆ.ವಿ.ಶ್ರೀನಿವಾಸ, ಪ್ರಾಚಾರ್ಯ ಕೆ.ಎನ್. ಆರಿಕಟ್ಟಿ ಅಭಿನಂದಿಸಿದ್ದಾರೆ.

error: Content is protected !!