ಜೆಇಇ: ಸರ್‌ಎಂವಿ ಕಾಲೇಜಿಗೆ ಉತ್ತಮ ಫಲಿತಾಂಶ

ಜೆಇಇ: ಸರ್‌ಎಂವಿ ಕಾಲೇಜಿಗೆ ಉತ್ತಮ ಫಲಿತಾಂಶ - Janathavani

ದಾವಣಗೆರೆ, ಮೇ 2- ಪ್ರಸ್ತುತ ಸಾಲಿನ ಜೆಇಇ ಪರೀಕ್ಷೆಯಲ್ಲಿ ಸರ್‌ಎಂವಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಪಡೆದಿದ್ದಾರೆ.

ಕಾಲೇಜಿನ ವಿದ್ಯಾರ್ಥಿ ಆದಿತ್ಯ ಆರ್. ಶಂಕರ್ ಶೇ. 99.57 ಫಲಿತಾಂಶ ಪಡೆಯುವ ಮೂಲಕ ಜಿಲ್ಲೆಗೆ  ಅತ್ಯುತ್ತಮ ಸ್ಥಾನ ಗಳಿಸಿದ್ದಾರೆ.

ಏಳು ವಿದ್ಯಾರ್ಥಿಗಳು ಸಾವಿರದೊಳಗಿನ ರಾಂಕ್ ಪಡೆದಿದ್ದಾರೆ. ಗಗನ್‌ದೀಪ್ 100 ನೇ ಆಲ್ ಇಂಡಿಯಾ ರಾಂಕ್ ಗಳಿಸಿದ್ದು, ಮಹಾದೇವಪ್ಪ ಕೆ. 126 ನೇ ರಾಂಕ್, ಅನಿರುದ್ಧ ಎಸ್ 159, ತೇಜಸ್ ಎಂ.ಎನ್. 443 ನೇ ರಾಂಕ್, ಅಭಿಷೇಕ್ ಬಿ.ಎನ್. 522 ನೇ ರಾಂಕ್, ಚೇತನ್ ಆರ್.ಬಿ. 554, ಅನುಷಾ ಬಿ.ಟಿ. 925 ನೇ ರಾಂಕ್ ಗಳಿಸಿದ್ದಾರೆ. ಕಾಲೇಜಿನ 221 ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಗಳಿಸಿಕೊಂಡಿದ್ದು, 124 ವಿದ್ಯಾರ್ಥಿಗಳು
ಶೇ. 90ಕ್ಕೂ ಹೆಚ್ಚು ಸಾಧನೆ ಮಾಡಿದ್ದಾರೆ. ಅತ್ಯುತ್ತಮ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ. 

error: Content is protected !!