ಪಿಯುಸಿ ಪರೀಕ್ಷೆ : ಲಲಿತಾ ಪದವಿ ಪೂರ್ವ ಕಾಲೇಜಿಗೆ ಶೇ. 100 ಫಲಿತಾಂಶ

ಪಿಯುಸಿ ಪರೀಕ್ಷೆ : ಲಲಿತಾ ಪದವಿ ಪೂರ್ವ ಕಾಲೇಜಿಗೆ ಶೇ. 100 ಫಲಿತಾಂಶ - Janathavaniದಾವಣಗೆರೆ, ಏ. 22- ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ನಗರದ ಲಲಿತಾ ಪದವಿ ಪೂರ್ವ ಕಾಲೇಜಿಗೆ ಶೇ. 100ರಷ್ಟು ಫಲಿತಾಂಶ ಬಂದಿದ್ದು, ವಿಜ್ಞಾನ ವಿಭಾಗದ ವೆಂಕಟ್‌ ಕಾರ್ತಿಕ್ ಶೇ. 97.5ರಷ್ಟು ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅಶ್ವಿನಿ ಕೆ.ಎಂ.,  ಸಿ.ಎನ್.ವೀರೇಶ್ ಮತ್ತು ಚಂದನ್ ಬಿ. ಕೋರಿ ಶೇ. 97ರಷ್ಟು ಅಂಕ ಪಡೆದು ಎರಡನೇ ಸ್ಥಾನ ಹಾಗೂ  ತರುಣ್ ಕೆ. ಶೇ. 96.8ರಷ್ಟು ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ 34 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 34 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ದ್ದಾರೆ. 16 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 15 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ 15 ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆ ದು ಕೊಂಡಿದ್ದು, 15 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಅನಿಲ್ ಬಿ.ಎಂ. ಶೇ. 97.75ರಷ್ಟು ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಭಾಗ್ಯಲಕ್ಷ್ಮಿ ಎಂ.ಎನ್. ಶೇ. 96.50 ರಷ್ಟು ಅಂಕ ಪಡೆದು ದ್ವಿತೀಯ ಹಾ ಗೂ ಕು.ಇಂದುದೀಪಾ ಶೇ. 90.75 ರಷ್ಟು ತೃತೀಯ ಸ್ಥಾನ ಪಡೆದಿದ್ದಾರೆ. 5 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 7 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಮತ್ತು 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಸಂಸ್ಥೆಯ ಅಧ್ಯಕ್ಷರಾದ
ಶ್ರೀಮತಿ ಇ.ಆರ್. ಶಶಿಕಲಾ, ಕಾರ್ಯದರ್ಶಿ  ಎಂ.ಇ. ರವಿರಾಜ್  ಅಭಿನಂದಿಸಿದ್ದಾರೆ.

error: Content is protected !!