ಮಲೇಬೆನ್ನೂರು, ಏ.21- ಕುಂಬಳೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.70 ರಷ್ಟು ಫಲಿತಾಂಶ ಲಭಿಸಿದೆ. ಪರೀಕ್ಷೆ ಬರೆದಿದ್ದ 40 ವಿದ್ಯಾರ್ಥಿಗಳ ಪೈಕಿ 28 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಉನ್ನತ ಶ್ರೇಣಿಯಲ್ಲಿ – 3, ಪ್ರಥಮ ಶ್ರೇಣಿಯಲ್ಲಿ – 9, ದ್ವಿತೀಯ ಶ್ರೇಣಿಯಲ್ಲಿ -6 ಮತ್ತು ತೃತೀಯ ಶ್ರೇಣಿಯಲ್ಲಿ 10 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕಲಾ ವಿಭಾಗದಲ್ಲಿ ಕೆ.ರಾಜು (548), ಎಸ್.ಎನ್.ದರ್ಶನ್ (527) ಮತ್ತು ಆರ್.ಎಂ.ಸಿಂಧು (521) ಅಂಕ ಪಡೆದಿದ್ದಾರೆ.
January 16, 2025