ಕಾಲೇಜಿಗೆ ಶೇ. 100 ಫಲಿತಾಂಶ
ದಾವಣಗೆರೆ, ಏ. 21- ನಗರದ ಬಿಐಇಟಿ ಕಾಲೇಜಿನ ಹಿಂಭಾಗದಲ್ಲಿರುವ ಬ್ರಾಹ್ಮಿ ಅಕಾಡೆಮಿ ಕಾಲೇಜಿಗೆ ಈ ಬಾರಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 100 ಕ್ಕೆ 100 ಫಲಿತಾಂಶ ಲಭಿಸಿದ್ದು, ಎ. ನವ್ಯ 582 (ಶೇ.97) ಅಂಕ ಪಡೆದು ರಾಜ್ಯಕ್ಕೆ 15ನೇ ಸ್ಥಾನ ಹಾಗೂ ಸಂಸ್ಥೆಗೆ ಪ್ರಥಮ ಸ್ಥಾನ ಪೆಡದಿದ್ದಾರೆ.
ಸುಜನ್ ಗೌಡ ಪಿಆರ್‌ಸಿ ಮತ್ತು ಬಿ.ಎಂ. ವೀರಭದ್ರಯ್ಯ 577 (ಶೇ.96.20) ಪಡೆದು ದ್ವಿತೀಯ ಸ್ಥಾನ ಪಡೆದರೆ, ಸ್ಫೂರ್ತಿ ಕಲ್ಮಠ 574 (ಶೇ. 95.70) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.
ಉತ್ತಮ ಫಲಿತಾಂಶ ಪಡೆದುಕೊಂಡ ವಿದ್ಯಾರ್ಥಿಗೆ ಕಾಲೇಜಿನ ಆಡಳಿತ ಮಂಡಳಿ ಅಭಿನಂದಿಸಿದೆ.