ಬಸವ ಬಳಗದಲ್ಲಿ ಇಂದಿನಿಂದ ಬಸವ ಜಯಂತಿ

ಬಸವ ಬಳಗ, ನೀಲಾಂಬಿಕಾ ಅನುಭಾವ ಕೇಂದ್ರ ಹಾಗೂ ಅಜ್ಜಂಪುರ ಶೆಟ್ರ ಸೇವಾ ಟ್ರಸ್ಟ್‌ ಇವರುಗಳ ಸಂಯುಕ್ತಾಶ್ರಯದಲ್ಲಿ ಇಂದಿನಿಂದ ಇದೇ ದಿನಾಂಕ 23ರ ವರೆಗೆ ಬಸವ ಜಯಂತಿ ಕಾರ್ಯಕ್ರಮಗಳನ್ನು ಸರಸ್ವತಿ ನಗರದ ಬಸವ ಬಳಗದಲ್ಲಿ ಹಮ್ಮಿಕೊಳ್ಳಲಾಗಿದೆ.

ಇಂದು ಬೆಳಿಗ್ಗೆ ಪ್ರಭಾತ್‌ ಫೇರಿಯ ನಂತರ 5 ರಿಂದ 15 ವರ್ಷದ ಮಕ್ಕಳಿಗೆ ಬೆಳಿಗ್ಗೆ 10 ಗಂಟೆಯಿಂದ ವಚನ ಕಂಠಪಾಠ ಸ್ಪರ್ಧೆ, ದಿನಾಂಕ 21 ರಂದು ಬೆಳಿಗ್ಗೆ 10 ಗಂಟೆಯಿಂದ ಪ್ರಬಂಧ ಸ್ಪರ್ಧೆ,   ದಿನಾಂಕ 22 ರಂದು ಬೆಳಿಗ್ಗೆ 10 ಗಂಟೆಗೆ ಶರಣ-ಶರಣೆಯರ ವೇಷ ಭೂಷಣ ಸ್ಪರ್ಧೆ, ದಿನಾಂಕ 23 ರ ಬೆಳಿಗ್ಗೆ 7 ಗಂಟೆಗೆ ಷಟ್‌ಸ್ಥಲ ಧ್ವಜಾರೋಹಣ ಹಾಗೂ ಸಾಮೂಹಿಕ ಇಷ್ಟಲಿಂಗ ಪೂಜೆ ಹಮ್ಮಿಕೊಳ್ಳಲಾಗಿದೆ. ವಿವರಕ್ಕೆ ಸಂಪರ್ಕಿಸುವ ಮೊಬೈಲ್ ಫೋನ್ ಸಂಖ್ಯೆ :  99720 84938, 73377 37884.

error: Content is protected !!