ಹೊನ್ನಾಳಿ, ಮಾ. 10- ತಾಲ್ಲೂಕಿನ ಸುಂಕದಕಟ್ಟೆ ಗ್ರಾಮದಲ್ಲಿ ಈಚೆಗೆ ಶ್ರೀ ನರಸಿಂಹ ಸ್ವಾಮಿ ದೊಡ್ಡ ರಥೋತ್ಸವ ನೆರವೇರಿತು. ಅಲಂಕೃತ ರಥಕ್ಕೆ ಭಕ್ತರು ಮಂಡಕ್ಕಿ, ಬಾಳೆಹಣ್ಣು, ಮೆಣಸಿನಕಾಳು ಎರಚುವ ಮೂಲಕ ಭಕ್ತಿ ಸಮರ್ಪಿಸಿದರು. ನಿನ್ನೆ ಬೆಳಿಗ್ಗೆ 10.30ಕ್ಕೆ ಹೂವಿನ ಉಚ್ಛಾಯ(ಬ್ರಹ್ಮ ರಥೋತ್ಸವ) ಜರುಗಿತು. ಸುಂಕದಕಟ್ಟೆ ಗ್ರಾಮದ ಶ್ರೀ ಮಂಜುನಾಥ ಸ್ವಾಮಿ, ಶ್ರೀ ನರಸಿಂಹ ಸ್ವಾಮಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಎಸ್.ಕೆ. ನರಸಿಂಹಮೂರ್ತಿ, ಪ್ರಧಾನ ಅರ್ಚಕ ಎಸ್. ರಾಜುಸ್ವಾಮಿ ಹಾಗು ಗ್ರಾಮಸ್ಥರು ಇದ್ದರು.
ಸುಂಕದಕಟ್ಟೆ ನರಸಿಂಹಸ್ವಾಮಿ ದೊಡ್ಡ ತೇರು
