ದಾವಣಗೆರೆ, ಮಾ. 6- ನಗರದ ಸೇಂಟ್ ಜಾನ್ಸ್ ವಿದ್ಯಾಸಂಸ್ಥೆಯಲ್ಲಿ ನರ್ಸರಿ ವಿಭಾಗದ ವಿದ್ಯಾರ್ಥಿಗಳಿಗೆ ತರಕಾರಿಗಳ ಮಹತ್ವ ತಿಳಿಸುವ ಸಲುವಾಗಿ ತರಕಾರಿಗಳ ದಿನ ಆಚರಿಸಲಾಯಿತು. ಎಲ್ಲಾ ಮಕ್ಕಳು ವಿವಿಧ ಬಗೆಯ ತಾಜಾ ತರಕಾರಿ ತಂದಿದ್ದರು. ತರಗತಿವಾರು ಸ್ಪರ್ಧೆ ಏರ್ಪಡಿಸಲಾಗಿತ್ತು.
ವಿದ್ಯಾರ್ಥಿಗಳು ವಿವಿಧ ಬಗೆಯ ತರಕಾರಿ ಬಳಸಿ ಮೊಸಳೆ, ಗಣೇಶ, ಇಲಿ, ಬೆಳ್ಳುಳ್ಳಿಗಳಿಂದ ಹಾರ, ಕ್ಯಾರೆಟ್ಗಳಿಂದ ಬಣ್ಣದ ಚಿಟ್ಟೆ ಮೊದಲಾವುಗಳನ್ನು ಸಿದ್ಧಪಡಿಸಿ, ತಮ್ಮ ತೊದಲು ನುಡಿಗಳ ಮೂಲಕ ತರಕಾರಿಗಳಲ್ಲಿರುವ ಜೀವಸತ್ವಗಳು, ಅವುಗಳಿಂದ ದೇಹಕ್ಕೆ ದೊರೆಯುವ ಪೌಷ್ಟಿಕಾಂಶಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಟಿ.ಎಂ. ಉಮಾಪತಯ್ಯ ಅವರು ತರಕಾರಿಗಳ ಸೇವನೆಯಿಂದ ಮಾನವನ ಆರೋಗ್ಯಕ್ಕೆ ಲಭಿಸುವ ಲಾಭ, ತರಕಾರಿ ಬೆಳೆಯುವ ಕಾರ್ಯವೈಖರಿಯ ಬಗ್ಗೆ ಮಕ್ಕಳಿಗೆ ತಿಳಿಸಿದರು.
ಈ ವಿಶೇಷ ದಿನದಲ್ಲಿ ಕೇಂದ್ರ ಪಠ್ಯಕ್ರಮದ ಪ್ರಾಂಶುಪಾಲರುಗಳು, ಬೋಧಕ ಮತ್ತು ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು, ಪೋಷಕ ವೃಂದದವರು ಪಾಲ್ಗೊಂಡಿದ್ದರು.