ದಾವಣಗೆರೆ, ಫೆ.21- ತಾಲ್ಲೂಕಿನ ದೇವರಬೆಳಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಿಕ್ಷಣ ಫೌಂಡೇಷನ್ ಅಡಿಯಲ್ಲಿ ದೇವರಬೆಳಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆಗಳಲ್ಲಿ ವ್ಯಾಸಾಂಗ ಮಾಡುತ್ತಿರುವ 4 ರಿಂದ 6ನೇ ವರ್ಗದ ವಿದ್ಯಾರ್ಥಿಗಳಿಗೆ ಗಣಿತ ಮೌಲ್ಯಾಂಕನ ಕಾರ್ಯಕ್ರಮವು ಇಂದು ನಡೆಯಿತು.
ಸಿಆರ್‌ಪಿ ಹೆಚ್.ಕೆ.ಸತೀಶ್ ಮಾತನಾಡಿ, ಮಕ್ಕಳು ಬೌದ್ಧಿಕ ಮಟ್ಟ ಹೆಚ್ಚಿಸಿಕೊಳ್ಳಬೇಕು. ಗಣಿತ ಕಲಿಕೆಗ ಒತ್ತು ನೀಡಲು ರಾಜ್ಯ ಹಂತದಲ್ಲಿ ಶಿಕ್ಷಣ ಫೌಂಡೇಷನನ್ನು ಇಲಾಖೆಯೊಂದಿಗೆ ಕೈ ಜೋಡಿಸಿದೆ ಎಂದರು.
ಮುಖ್ಯಶಿಕ್ಷಕ ಆರ್.ಆರ್.ಮಠ ಮಾತನಾಡಿ, ಕಬ್ಬಿಣ ಕಡಲೆ ಎಂದು ಗಣಿತ ಕಲಿಕೆಯನ್ನು ಯಾರೂ ಭಾವಿಸಬಾರದು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇದರ ಕಲಿಕೆ ಅತ್ಯಗತ್ಯ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಗ್ರಾ.ಪಂ. ಅಧ್ಯಕ್ಷ ಕೆ.ಹೆಚ್.ಜಗದೀಶ್ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬೀರೇಶ್, ಸದಸ್ಯರಾದ ಕರಿಬಸಪ್ಪ, ಐ.ಎಸ್.ಮಲ್ಲಿಕಾರ್ಜುನ್, ಉಪಾಧ್ಯಕ್ಷರಾದ ರತ್ನಮ್ಮ ಚಂದ್ರಶೇಖರ್, ಮಹೇಶ್ವರಯ್ಯ, ಎಸ್‌ಡಿಎಂಸಿ ಅಧ್ಯಕ್ಷರಾದ ಶ್ರೀಮತಿ ಜೆ.ಎಂ.ಲತಾ ಕೊಟ್ರೇಶ್ ಅವರುಗಳು ಉಪಸ್ಥಿತರಿದ್ದರು.
ಹಿರಿಯ ಶಿಕ್ಷಕ ಟಿ.ಎಸ್.ಕುಮಾರಸ್ವಾಮಿ ಸ್ವಾಗತಿಸಿದರು. ಬೂದಿಹಾಳು ಶಾಲಾ ಮುಖ್ಯಸ್ಥ ಕೆ.ಹೆಚ್.ಹನುಮಂತಪ್ಪ ವಂದಿಸಿದರು.