ಹರಪನಹಳ್ಳಿ : ಸಾಕ್ಷರತಾ ದಿನಾಚರಣೆಯಲ್ಲಿ ಪಿ.ಅನಂತರಾಜ್
ಹರಪನಹಳ್ಳಿ, ಸೆ.8 – ಅಂಧರಿಗೆ ಕಣ್ಣನ್ನು ನೀಡಿದಂತೆ, ಅನಕ್ಷರಸ್ಥರಿಗೆ ಅಕ್ಷರವನ್ನು ಪ್ರಾಮಾ ಣಿಕವಾಗಿ ಕಲಿಸಿದಲ್ಲಿ ಅನಕ್ಷರಸ್ಥ ಸಾಕ್ಷರತೆಯ ಬೆಳಕಿನೆಡೆಗೆ ಬರುತ್ತಾನೆ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಪಿ.ಅನಂತರಾಜ್ ಹೇಳಿದ್ದಾರೆ.
ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರ ಣದಲ್ಲಿ ಅಂತರರಾಷ್ಟ್ರೀಯ ಸಾಕ್ಷರತಾ ದಿನಾ ಚರಣೆ ಅಂಗವಾಗಿ ಸಾಕ್ಷರತಾ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ವಿದ್ಯಾವಂತರು ತಮ್ಮ ಮನೆಯಲ್ಲಿರುವ ಅನಕ್ಷರಸ್ಥರಿಗೆ ಅಕ್ಷರಭ್ಯಾಸ ಮಾಡಿಸುವ ಪ್ರಾಮಾ ಣಿಕ ಪ್ರಯತ್ನ ಮಾಡಬೇಕು. ವಿದ್ಯಾವಂತರು ಕನಿಷ್ಠ 5 ಜನರಿಗೆ ಅಕ್ಷರಭ್ಯಾಸ ಮಾಡಿಸಲು ಮುಂದಾ ಗಬೇಕು. ಗ್ರಾಮಗಳಲ್ಲಿ ಇನ್ನೂ ಅನಕ್ಷರಸ್ಥರು ಹೆಚ್ಚಾಗಿದ್ದಾರೆ. ನೋಡಲ್ ಅಧಿಕಾರಿಗಳ ಮೂಲಕ ತಾಲ್ಲೂಕಿನಲ್ಲಿ ಅನಕ್ಷರಸ್ಥರನ್ನು ಗುರುತಿಸಿ ಅವರನ್ನುನವ ಸಾಕ್ಷರರನ್ನಾಗಿ ಮಾಡಬೇಕು ಎಂದು ಕರೆ ನೀಡಿದರು. ತಾಲ್ಲೂಕು ಸಾಕ್ಷರತಾ ನೋಡಲ್ ಅಧಿಕಾರಿ ಮೇಟಿ ಮಂಜುನಾಥ ಮಾತನಾಡಿ, 2011ರ ಜನಗಣತಿಯ ಪ್ರಕಾರ ಹರಪನಹಳ್ಳಿ ತಾಲ್ಲೂಕಿ ನಲ್ಲಿ ಶೇ.76.76ರಷ್ಟು ಗಂಡು ಮಕ್ಕಳು, ಶೇ.59.12ರಷ್ಟು ಹೆಣ್ಣು ಮಕ್ಕಳು ಸಾಕ್ಷರರಾಗಿದ್ದಾರೆ. ಒಟ್ಟಾರೆ ಶೇ.32ರಷ್ಟು ಅನಕ್ಷರಸ್ಥರಿದ್ದು ಅವರನ್ನು ಸಾಕ್ಷರರನ್ನಾಗಿ ಮಾಡವುದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಈ ಸಂದರ್ಭದಲ್ಲಿ ಎಂಆರ್‍ಡಬ್ಲ್ಯೂ ಧನರಾಜ್, ಬುಳ್ಳನಗೌಡ, ದೈಹಿಕ ಶಿಕ್ಷಕರಾದ ಜನಾರ್ಧನ ರೆಡ್ಡಿ, ಎಸ್.ಟಿ.ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.