ತಪ್ಪು ಮಾಡಿದರೆ ತಿದ್ದಿ ಸರಿದಾರಿಗೆ ತರುವ ಅಧಿಕಾರ ಗುರುಗಳಿಗೆ ಇದೆ

ಜಗಳೂರಿನಲ್ಲಿ ಶಾಸಕ ಎಸ್.ವಿ. ರಾಮಚಂದ್ರ

ಜಗಳೂರು, ಸೆ.7- ಏನೇ ಸಮಸ್ಯೆಗ ಳಿದ್ದರೂ ಶಿಕ್ಷಕರು ನೇರವಾಗಿ ನನ್ನೊಂದಿಗೆ ಮಾತನಾಡಿ, ನಾನು ತಪ್ಪು ಮಾಡಿದರೆ ತಿದ್ದಿ ಸರಿದಾರಿಗೆ ತರುವ ಅಧಿಕಾರ ನಮ್ಮ ಗುರುಗಳಿಗೆ ಇದೆ ಎಂದು ಶಾಸಕರೂ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗ ಮದ ಅಧ್ಯಕ್ಷರಾದ ಎಸ್.ವಿ. ರಾಮಚಂದ್ರ  ಹೇಳಿದರು.

ಪಟ್ಟಣದ ಗುರು ಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ   ವತಿಯಿಂದ  ಆಯೋಜಿಸಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ 132 ನೇ ಜನ್ಮ ದಿನಾಚರಣೆ ಮತ್ತು ಶಿಕ್ಷಕರ ದಿನಾಚರಣೆ   ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕರ ಪರಿಶ್ರಮದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕು `ಎ’ ಶ್ರೇಣಿ ಪಡೆದುಕೊಂಡಿದೆ. ವಿದ್ಯಾರ್ಥಿಗಳ ಸಾಧನೆ ಶ್ಲಾಘನೀಯ ಎಂದರು.

ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಮತ್ತು ಆನ್‌ಲೈನ್ ತರಗತಿಗೆ ಅನುಕೂಲವಾಗಲೆಂದು ವೈಯಕ್ತಿಕವಾಗಿ ಸ್ಮಾರ್ಟ್ ಫೋನ್‌ಗಳನ್ನು ಕೊಡಿಸುವುದಾಗಿ ಶಾಸಕರು ಭರವಸೆ ವ್ಯಕ್ತಪಡಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಅಮೀತ್ ಡಿ.ಕೆ., ಮೇಘನಾ ಕುಂಬಾರ್, ದಿವ್ಯಾ ಜಿ.ಪಿ, ಲಕ್ಷ್ಮಿ. ಬಿ. ನಾಲ್ಕು ವಿದ್ಯಾರ್ಥಿಗಳಿಗೆ ಶಾಸಕರು ತಲಾ ಹತ್ತು ಸಾವಿರ ಪ್ರೋತ್ಸಾಹ ಧನ ನೀಡಿ ಗೌರವಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಶಿವಾನಂದಪ್ಪ  ಕಾಯಕ್ರಮ ಉದ್ಘಾಟಿಸಿದರು. ಸಮಾ ರಂಭದಲ್ಲಿ ಶ್ರೀಮತಿ ಇಂದಿರಾ ರಾಮಚಂದ್ರ, ಜಿಪಂ  ಸದಸ್ಯರಾದ ಮಂಜುನಾಥ್. ತಾಲ್ಲೂಕು ಪಂಚಾಯಿತಿ ಸದಸ್ಯರಾದ ಶಂಕರ್ ನಾಯ್ಕ್. ತಿಮ್ಮೇಶ್.  ತಾಲ್ಲೂಕು ದಂಡಾಧಿಕಾರಿ  ನಾಗವೇಣಿ. ಪ್ರಭಾರ ಕಾರ್ಯನಿರ್ವ ಹಣಾಧಿಕಾರಿ ಆನಂದ್. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್. ವೆಂಕಟೇಶ್, ಕ್ಷೇತ್ರ ಸಮನ್ವಯಾಧಿಕಾರಿ ಗಿರೀಶ್, ಪ್ರಾಥ ಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಭಾಗವಹಿಸಿದ್ದರು.

error: Content is protected !!