ಹರಿಹರ, ಡಿ.18- ವಿಶ್ವಬಂಧು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು 2019-20 ನೇ ಸಾಲಿನಲ್ಲಿ 38,88,373 ರೂಪಾಯಿ ನಿವ್ವಳ ಲಾಭ ಗಳಿಸುವ ಮೂಲಕ ಉತ್ತಮ ಸಹಕಾರಿ ಸೊಸೈಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ವಿಶ್ವಬಂಧು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಬಿ. ರಾಮಚಂದ್ರಪ್ಪ ಬೆಳ್ಳೂಡಿ ಹರ್ಷ ವ್ಯಕ್ತಪಡಿಸಿದರು.
ನಗರದ ಶ್ರೀ ತರಳಬಾಳು ಜಗದ್ಗುರು ಶಾಲಾ ಆವರಣದಲ್ಲಿ ವಿಶ್ವಬಂಧು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 22 ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಸ್ಥೆಯು 1,240 ಸದಸ್ಯರನ್ನು ಹೊಂದಿ ಸುಮಾರು 80,38,903 ರೂಪಾಯಿ ಷೇರು ಬಂಡವಾಳ ಹೊಂದಿದೆ. 13 ಕೋಟಿ 58 ಲಕ್ಷ ರೂಪಾಯಿ ದುಡಿಯುವ ಬಂಡವಾಳವನ್ನು ಹೊಂದಿದ್ದು, 11 ಕೋಟಿ 16 ಲಕ್ಷ ರೂಪಾಯಿಯಷ್ಟು ಸದಸ್ಯರ ಠೇವಣಿಯನ್ನು ಹೊಂದಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಸಂತೇಬೆನ್ನೂರು ಹಾಗೂ ನಲ್ಲೂರಿನಲ್ಲಿ ನೂತನ ಶಾಖೆಗಳನ್ನು ತೆರೆಯಲಾಗುವುದು. ಸದಸ್ಯರಿಗೆ ಈ ವರ್ಷ ಶೇ. 15 ಡಿವಿಡೆಂಟ್ ನೀಡಲಾಗುವುದು ಎಂದು ತಿಳಿಸಿದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸದಸ್ಯರ ಪ್ರತಿಭಾನ್ವಿತ ಮಕ್ಕಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ಉಪಾಧ್ಯಕ್ಷರಾದ ಡಿ. ವನಜಾಕ್ಷಮ್ಮ ಕುಂಬಳೂರು, ಕೆ. ಕುಮಾರ್ ಹೊಳೆಸಿರಿಗೆರೆ, ಹೆಚ್. ನಾಗರಾಜ್ ಅಮರಾವತಿ, ಹೆಚ್. ಶಾಂತವೀರಪ್ಪ ಯಲವಟ್ಟಿ, ಕೆ. ದೇವೇಂದ್ರಪ್ಪ ಹೊಳೆಸಿರಿಗೆರೆ, ಕೆ.ಜಿ. ಮೂರ್ತಿ ಕುಂಬಳೂರು, ಕೆ.ಎಸ್. ದೇವರಾಜ್ ಕುಂಬಳೂರು, ಪಾರ್ವತಮ್ಮ ಶೇಖರಪ್ಪ ಹರಿಹರ, ಜಿ. ಮಲ್ಲಪ್ಪ ಬೆಳ್ಳೂಡಿ, ಕಡೆಮನೆ ಪುಟ್ಟಪ್ಪ ಕುಂಬಳೂರು, ಎನ್. ನಾಗರಾಜ್ ಹೊಳೆಸಿರಿಗೆರೆ, ಎನ್.ಕೆ. ಪ್ರಕಾಶ್ ಬೆಳ್ಳೂಡಿ, ವ್ಯವಸ್ಥಾಪಕ ಕೆ.ಟಿ. ಶಂಭುಲಿಂಗಪ್ಪ ಉಪಸ್ಥಿತರಿದ್ದರು.
ಸಿಬ್ಬಂದಿಗಳಾದ ಬಿ. ಗಣೇಶ, ಕೆ.ಹೆಚ್. ಉಮೇಶ್, ಬಿ.ಎಸ್. ರಾಘವೇಂದ್ರ ಕುಮಾರ್, ಜಿ.ಎಮ್. ರವಿಕುಮಾರ್ , ಜಿ.ಎನ್. ನಿರ್ಮಲ, ಪಿಗ್ಮಿ ಸಂಗ್ರಹಕರಾದ ಹನುಮಂತಪ್ಪ ಬೇಡರ್, ಆರ್.ಬಿ. ಸುರೇಶ್, ಎ.ಬಿ. ಮಂಜುನಾಥ್, ಎಸ್.ಬಿ. ವಿಜಯಕುಮಾರ್, ಹೆಚ್. ಶಿವಮೂರ್ತಿ, ಎಸ್. ಫಣಿರಾಜ್, ಜಿ.ಆರ್. ಭೀಮಪ್ಪ, ಜಿ.ಎಂ. ವಸಂತ್ ಕುಮಾರ್, ಜಿ.ಆರ್. ನಾಗರಾಜ್. ಎ.ಎಸ್. ಟಾಟಾದೇವ್ ಇನ್ನಿತರರಿದ್ದರು.