ರಾಷ್ಟ್ರಮಟ್ಟದ ಹೊನಲು ಬೆಳಕಿನ ಲೀಗ್ ಕಂ ನಾಕೌಟ್ ಕ್ರಿಕೆಟ್ ಟೂರ್ನಿ ಆರಂಭ

ಬ್ಯಾಟಿಂಗ್ ಮುಖೇನ ಎಸ್ಸೆಸ್ – ಕೊಂಡಯ್ಯ ವಿಧ್ಯುಕ್ತ ಚಾಲನೆ

ದಾವಣಗೆರೆ, ನ.25- ದಾವಣಗೆರೆ ಇಲೆವೆನ್ಸ್ ಕ್ರಿಕೆಟ್ ಕ್ಲಬ್ ಹಾಗೂ ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ 13ನೇ ಬಾರಿಗೆ ದಿ. ಪಾರ್ವತಮ್ಮ ಶಾಮನೂರು ಶಿವಶಂಕರಪ್ಪನವರ ಸವಿನೆನಪಿನ ಅಂಗವಾಗಿ 5 ದಿನಗಳ ಶಾಮನೂರು ಡೈಮಂಡ್ ಹಾಗೂ ಶಿವಗಂಗಾ ಕಪ್ ರಾಷ್ಟ್ರಮಟ್ಟದ ಹೊನಲು ಬೆಳಕಿನ ಲೀಗ್ ಕಂ ನಾಕೌಟ್ ಕ್ರಿಕೆಟ್ ಟೂರ್ನಿಗೆ ಇಂದು ಸಂಜೆ ಚಾಲನೆ ದೊರೆಕಿತು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿರುವ ಪಂದ್ಯಾವಳಿಗೆ ಶಾಸಕರುಗಳಾದ ಡಾ. ಶಾಮನೂರು ಶಿವಶಂಕರಪ್ಪ ಹಾಗೂ ಕೆ.ಸಿ. ಕೊಂಡಯ್ಯ ಅವರು ಬ್ಯಾಟಿಂಗ್ ಮಾಡುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ಈ ವೇಳೆ ಮಾತನಾಡಿದ ಕೆ.ಸಿ. ಕೊಂಡಯ್ಯ, ಕ್ರೀಡಾಪಟುಗಳ ಪ್ರೋತ್ಸಾಹಿಸುವ ಮತ್ತು ಕ್ರೀಡಾಸಕ್ತರ ಮನವ ರಂಜಿಸುತ್ತಾ ಕ್ರಿಕೆಟ್ ಆಟಕ್ಕೆ ಜೀವ ತುಂಬುವ ನಿಟ್ಟಿನಲ್ಲಿ ಈ ವರ್ಷವೂ ಆಯೋಜಿಸಲಾಗಿರುವ ಈ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಲಿ. ಮುಂದಿನ ದಿನಗಳಲ್ಲೂ ದೊಡ್ಡ ಪ್ರಮಾಣದಲ್ಲಿ ನಡೆಯಲಿ ಎಂದು ಆಶಿಸಿದರು.

ಅಥಣಿ ವೀರಣ್ಣ ಮಾತನಾಡಿ, ಇಂದಿನಿಂದ ಇದೇ ದಿನಾಂಕ 29ರವರೆಗೆ  ಈ ಕ್ರಿಕೆಟ್ ಪಂದ್ಯಾ ವಳಿ ಚಿರಸ್ಮರಣೆಯ ದಿನವಾಗಿದ್ದು, ಅದ್ಧೂರಿಯಾಗಿ ದಾವಣಗೆರೆಯಲ್ಲಿ ಜನ ಮೆಚ್ಚುವಂತಹ ಮತ್ತು ಮನಮುಟ್ಟುವ ಪಂದ್ಯಾವಳಿ ಇದಾಗಿದೆ. ರಾಜ್ಯ, ರಾಷ್ಟ್ರಮಟ್ಟದಲ್ಲಿ ಕ್ರಿಕೆಟ್ ಪಂದ್ಯಾವಳಿ ಹೆಚ್ಚಿನ ರೀತಿಯಲ್ಲಿ ಬೆಳೆಯುತ್ತಿದ್ದು, ಈ ಪಂದ್ಯಾವಳಿಯಲ್ಲಿ ಅಂತರರಾಜ್ಯ ಕ್ರಿಕೆಟ್ ಪಟುಗಳು ಭಾಗವಹಿಸಿರು ವುದು ಕ್ರೀಡಾಭಿಮಾನಿಗಳಿಗೆ ಹಬ್ಬವನ್ನುಂಟು ಮಾಡ ಲಿದೆ. ಈ ಪಂದ್ಯಾವಳಿ ಯಶಸ್ವಿಯಾಗಲೆಂದರು.

ಈ ಟೂರ್ನಿಯಲ್ಲಿ ಹೊರ ರಾಜ್ಯದ ಕೇರಳ, ಚೆನೈ, ಗೋವಾ, ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ ಸೇರಿದಂತೆ ಒಟ್ಟು 24 ತಂಡಗಳು ಭಾಗವಹಿಸಿವೆ. ವಿಶೇಷವಾಗಿ ಪೊಲೀಸ್ ತಂಡ, ಪತ್ರಕರ್ತರ ತಂಡ, ವರ್ತಕರ ತಂಡ, ಜಿಲ್ಲಾಧಿಕಾರಿಗಳ ತಂಡ, ನಗರ ಪಾಲಿಕೆ ಸದಸ್ಯರ ತಂಡ, ವಕೀಲರ ತಂಡ ಸೇರಿ ಒಟ್ಟು 8 ಅಫೀಶಿಯಲ್ ಕಪ್ ಪಂದ್ಯಾವಳಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ತಿಳಿಸಿದರು.

ದಾವಣಗೆರೆ ಇಲೆವೆನ್ಸ್ ಮತ್ತು ಚಿತ್ರದುರ್ಗದ ಎಸ್ ಎಂಸಿಸಿ ರಾಕರ್ಸ್ ತಂಡದ ಮಧ್ಯೆ ಮೊದಲ ಪಂದ್ಯ ನಡೆಯಿತು. ಟಾಸ್ ಗೆದ್ದು ದಾವಣಗೆರೆ ಇಲೆವೆನ್ಸ್ ತಂಡ ಬ್ಯಾಟಿಂಗ್ ಗಿಳಿಯಿತು.

ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯ ದೇವರಮನೆ ಶಿವಕುಮಾರ್, ಬಿ.ಹೆಚ್. ವೀರಭದ್ರಪ್ಪ, ಎನ್.ಎ. ಮುರುಗೇಶ್, ಶಿವಗಂಗಾ ಶ್ರೀನಿವಾಸ, ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್, ರಾಜು ರೆಡ್ಡಿ, ಇಂದ್ರಪ್ಪ, ಮಹಾದೇವ, ಸಿಪಿಐ ಶಂಕರ್, ಸಂಘದ ಸಹ ಕಾರ್ಯದರ್ಶಿ ಜಯಪ್ರಕಾಶ್ ಗೌಡ, ಕುರುಡಿ ಗಿರೀಶ್, ಟಿ. ಯುವರಾಜ್, ಶಿವಣ್ಣ, ಚಂದ್ರು, ಮಧು, ರಂಗಸ್ವಾಮಿ, ಶಿವಕುಮಾರ್, ಆಕಾಶ್, ರಾಘವೇಂದ್ರ, ಯೋಗೀಶ್, ಗಣೇಶ್, ವರುಣ್, ಪ್ರಕಾಶ್ ಸೇರಿದಂತೆ ಇತರರು ಇದ್ದರು.

error: Content is protected !!