ಪ್ರತಿ ವಾರ್ಡುಗಳೂ ಪವಿತ್ರ ವನಗಳಾಗಲಿ

ಎಂ.ಸಿ.ಸಿ. `ಬಿ’ ಬ್ಲಾಕ್‌ನಲ್ಲಿನ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಆಶಯ

ದಾವಣಗೆರೆ, ಜು.22- ನಗರದ 38ನೇ ವಾರ್ಡ್‌ನ ಎಂ.ಸಿ.ಸಿ `ಬಿ’ ಬ್ಲಾಕ್ ನ ನಾಗರಿಕರ ಹಿತರಕ್ಷಣಾ ಸಮಿತಿಯ ಸಹಯೋಗದೊಂದಿಗೆ ಸ್ಮಾರ್ಟ್‌ಸಿಟಿ ವತಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಪಾಲಿಕೆ ಸದಸ್ಯ ಜಿ.ಎಸ್.ಮಂಜುನಾಥ್ ಗಡಿಗುಡಾಳ್ ಅವರು ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಂಜುನಾಥ್, ಕನ್ನಡ ನಾಡು ಎಂದರೆ ಕೇವಲ ಭಾಷೆ ಅಷ್ಟೇ ಅಲ್ಲ, ನಮ್ಮ ಸುತ್ತಲಿನ ಸಸ್ಯರಾಶಿ, ಪ್ರಾಣಿ ಪಕ್ಷಿಗಳು ಕನ್ನಡ ನಾಡಿನ ಹೆಮ್ಮೆಯ ಗರಿಗಳೇ ಆಗಿವೆ. ಹಾಗೆಯೇ ಪ್ರಪಂಚದಾದ್ಯಂತ ಸ್ಥಳೀಯ ನಾಗರಿಕರು ಕೂಡ ತಮ್ಮ ಪರಿಸರದ ಜೀವ ವೈವಿಧ್ಯವನ್ನು ಕಾಪಾಡುವ ಕೆಲಸ ಮಾಡಬೇಕಾಗಿದೆ ಎಂದು ಕರೆ ನೀಡಿದರು.

ಪ್ರತಿಯೊಬ್ಬರೂ ಪರಿಸರ ಉಳಿಸುವಂತಹ ಕೆಲಸ ಮಾಡಬೇಕಾಗಿದ್ದು, ಪ್ರತಿ ವಾರ್ಡುಗಳ ಬಡಾವಣೆ, ಪ್ರದೇಶಗಳನ್ನು ಪವಿತ್ರ ವನಗಳನ್ನಾಗಿ ಮಾಡಬೇಕು ಎಂದು ಆಶಯ ವ್ಯಕ್ತಪಡಿಸಿದ ಅವರು, ಪರಿಸರ ಉಳಿದರೆ ನಾವು ಉಳಿಯಲಿದ್ದೇವೆ ಎಂಬುದನ್ನು ಅರಿತುಕೊಳ್ಳಬೇಕು ಎಂದರು.

ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಪಾಲಿಕೆ ಆರೋಗ್ಯ ನಿರೀಕ್ಷಕರಾದ ಸಂತೋಷ್, ಮಹಾಂತೇಶ್, ಎಂ.ಸಿ.ಸಿ `ಬಿ’ ಬ್ಲಾಕ್ ನಾಗರಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಂದನೂರು ಮುಪ್ಪಣ್ಣ, ಜಿ.ಎಸ್. ಪರಮೇಶಗೌಡ್ರು, ಎಸ್.ಟಿ.ಕುಸುಮ ಶೆಟ್ರು, ಗುರುಮೂರ್ತಿ, ರವೀಂದ್ರನಾಥ್, ಬಾಡ ಬಸವರಾಜಪ್ಪ, ಸ್ಮಾರ್ಟ್‌ಸಿಟಿ ಅಭಿಯಂತರ ಭರತ್, ಪಾಲಿಕೆ ಅಭಿಯಂತರ ಪ್ರವೀಣ್, ಜ್ಯೋತಿರ್ಲಿಂಗ, ಐನಳ್ಳಿ ಮಹಾಬಲೇಶ್, ಆರ್.ಜಿ.ಧನೇಶ್, ಪ್ರಮೋದ್, ನಿಖಿಲ್, ನೀಲಕಂಠಪ್ಪ, ಶೌಕತ್ ಅಲಿ, ಭರತ್, ಬಸವನಗೌಡ್ರು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!